Back to Top

“ನ್ಯಾನ್ಸಿ, ಯೂಟರ್ನ್ ಹೀರೋಯಿನ್, ಬೀಚ್ ಕ್ವೀನ – ಶ್ರದ್ಧಾ ಶ್ರೀನಾಥ್ ಬೀಚ್‑ಬಿಕಿನಿ ಫೋಟೋ ವೈರಲ್”

SSTV Profile Logo SStv June 28, 2025
ಶ್ರದ್ಧಾ ಶ್ರೀನಾಥ್ ಬೀಚ್‑ಬಿಕಿನಿ ಫೋಟೋ ವೈರಲ್
ಶ್ರದ್ಧಾ ಶ್ರೀನಾಥ್ ಬೀಚ್‑ಬಿಕಿನಿ ಫೋಟೋ ವೈರಲ್

ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ನಟಿ ಶ್ರದ್ಧಾ ಶ್ರೀನಾಥ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೀಗ ಹಾಟ್ & ಬೋಲ್ಡ್ ಲುಕ್‌ನಲ್ಲಿ ಪೋಸ್ಟ್ ಮಾಡಿದ ಬೀಚ್ ಫೋಟೋಗಳು ವೈರಲ್ ಆಗಿವೆ. “It was not a dream” ಎಂಬ ಬಿಗ್ ಸ್ಟೇಟ್‌ಮೆಂಟ್ ಕ್ಯಾಪ್ಷನ್‌ನೊಂದಿಗೆ ಶ್ರದ್ಧಾ ಶೇರ್ ಮಾಡಿರುವ ಈ ಚಿತ್ರಗಳು ಪಡ್ಡೆ ಹೈಕ್ಳಿಗೆ ನಿದ್ದೆ ಕಳೆಯುವಂತೆ ಮಾಡಿವೆ!

2024ರ ಆರಂಭದಲ್ಲಿ ಅವರು ನಟಿಸಿದ್ದ ತೆಲುಗಿನ ಡಾಕು ಮಹಾರಾಜ್ ಮತ್ತು ತಮಿಳಿನ ಕಲಿಯುಗಮ್ ಚಿತ್ರಗಳು ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ನೊಂದೆಡೆ, 10 ವರ್ಷಗಳ ಚಿತ್ರರಂಗದ ಪ್ರಯಾಣದಲ್ಲಿ ಶ್ರದ್ಧಾ ಶ್ರೀನಾಥ್ ವಿಭಿನ್ನ ಪಾತ್ರಗಳಿಂದ ತಮ್ಮದೇ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.

ಶ್ರದ್ಧಾ ಅವರ ಬಿಕಿನಿ ಲುಕ್‌ಗೆ, “ಬೀಚ್ ಕ್ವೀನ್”, “ಫ್ಯಾಶನ್ ಐಕಾನ್”, “ನಮ್ಮ ಮೂಗುತಿ ಸುಂದರಿ ಇವನ್ತೋ…” ಎಂಬ ಅನೇಕ ಕಾಮೆಂಟ್‌ಗಳು ಹರಿದುಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು, ಈಗಾಗಲೇ 1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಈ ಫೋಟೋಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಫ್ಯಾಷನ್ ಜಗತ್ತಲ್ಲಿಯೂ ಶ್ರದ್ಧಾ ತಮ್ಮದೇ ಛಾಪು ಬಿತ್ತಿದ್ದಾರೆ ಎನ್ನುವುದು ಸ್ಪಷ್ಟ.