Back to Top

ಶೂಟಿಂಗ್ ವೇಳೆ ಗಾಯಗೊಂಡ ಶಾರುಖ್ ಖಾನ್ – 'ಕಿಂಗ್' ಚಿತ್ರೀಕರಣ ತಾತ್ಕಾಲಿಕ ಸ್ಥಗಿತ

SSTV Profile Logo SStv July 19, 2025
ಶೂಟಿಂಗ್ ವೇಳೆ ಗಾಯಗೊಂಡ ಶಾರುಖ್ ಖಾನ್
ಶೂಟಿಂಗ್ ವೇಳೆ ಗಾಯಗೊಂಡ ಶಾರುಖ್ ಖಾನ್

ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರು ತಮ್ಮ ಮುಂದಿನ ಸಿನಿಮಾ ‘ಕಿಂಗ್’ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಮುಂಬೈನ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಶೂಟಿಂಗ್ ಸಮಯದಲ್ಲಿ ಅವರು ಸ್ಟಂಟ್ ಮಾಡುತ್ತಿದ್ದ ವೇಳೆ ಮಸಲ್ ಇಂಜೂರಿಗೆ ಒಳಗಾಗಿದ್ದಾರೆ.

ಈ ಗಾಯದ ಹಿನ್ನೆಲೆ, ಶಾರುಖ್ ಖಾನ್ ಅವರು ಪ್ರಸ್ತುತ ಒಂದು ತಿಂಗಳ ವಿಶ್ರಾಂತಿ ಪಡೆಯಬೇಕಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಸಂಗತೆಯೆಂದರೆ, ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಮಹಾಸಫಲತೆಯ ಬಳಿಕ ಈ ಅಪಘಾತ ಸಂಭವಿಸಿದೆ.

‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಿರ್ದೇಶನವನ್ನು ಸಿದ್ಧಾರ್ಥ್ ಆನಂದ್ ಕೈಹಿಡಿದಿದ್ದಾರೆ.

ಈಗಾಗಲೇ ಫಿಲ್ಮ್ ಸಿಟಿ, ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋ ಮತ್ತು ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋ ಶೂಟಿಂಗ್‌ಗಾಗಿ ಬುಕ್ ಮಾಡಲಾಗಿದ್ದರೂ, ಅದನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಶಾರುಖ್ ಖಾನ್ ಅವರು ಸಂಪೂರ್ಣವಾಗಿ ಗುಣಮುಖರಾದ ಬಳಿಕ ‘ಕಿಂಗ್’ ಶೂಟಿಂಗ್ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪುನರಾರಂಭವಾಗಲಿದೆ. ಅಭಿಮಾನಿಗಳು ಶಾರುಖ್ ಅವರ ಶೀಘ್ರ ಚೇತರಿಕೆಯನ್ನು ಹಾರೈಸುತ್ತಿದ್ದಾರೆ.