ವೈಲ್ಡ್ ಕಾರ್ಡ್ ಎಂಟ್ರಿಯಿಂದ ಶೋಭಾ ಶೆಟ್ಟಿಯ ಮೆಚ್ಚುಗೆ ಧರ್ಮಗೆ ಬಿಗ್ ಬಾಸ್ ಕನ್ನಡ 11ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ರಜತ್ ಕಿಷೆನ್ ಮತ್ತು ಶೋಭಾ ಶೆಟ್ಟಿ ಪ್ರವೇಶಿಸಿದ್ದಾರೆ. ಇವರ ಆಗಮನದಲ್ಲಿ ಮನೆಯ ಸ್ಪರ್ಧಿಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಜೋಡಿ ಪ್ರವೇಶದ ನಂತರ ನಡೆದ ಟಾಸ್ಕ್‌ನಲ್ಲಿ ಶೋಭಾ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಧರ್ಮ ಕೀರ್ತಿರಾಜ್ ಅವರ ಬಗ್ಗೆ ಶೋಭಾ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, "ಐ ಲೈಕ್ ಯೂ ಧರ್ಮ" ಎಂದು ಹೇಳಿದ್ದಾರೆ. ಧರ್ಮ ಶೋಭಾಗೆ ಸಹಾಯ ಮಾಡಿದ ರೀತಿ ಮತ್ತು ಅವರ ನಡೆ-ನುಡಿಗೆ ಶೋಭಾ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮಾತು ಕೇಳಿ ಧರ್ಮ ನಾಚಿಕೆಪಟ್ಟರು.
ಶೋಭಾ, ಟಾಸ್ಕ್ ವೇಳೆ, "ಗೌತಮಿ ಇನ್ನೂ ಮುಖವಾಡ ಧರಿಸಿದ್ದಾರೆ. ಅವರ ಅಸಲಿ ಮುಖವನ್ನು ಬಯಲು ಮಾಡುತ್ತೇನೆ," ಎಂದು ತೆಂಗಿನಕಾಯಿ ಒಡೆದರು. ಮಂಜು ಪಾವಗಡರ ಬಗ್ಗೆ ಮಾತಾಡುತ್ತಾ, "ಮಂಜು ನಂಬಿಕಸ್ಥ ಎಂಬ ಭರವಸೆ ನನಗೆ ಇಲ್ಲ," ಎಂದು ಅಂತರ ಕಾಯ್ದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಇನ್ನೂ ರಜತ್, ತ್ರಿವಿಕ್ರಮ್ ಹೆಸರನ್ನು ಉಲ್ಲೇಖಿಸಿ ನೇರಾ ನೇ ಠಕ್ಕರ್ ಕೊಟ್ಟರು. ಇವರ ಆಗಮನದೊಂದಿಗೆ ಮನೆಯ ಆಟ ಮತ್ತಷ್ಟು ರೋಮಾಂಚಕವಾಗಿದ್ದು, ಮುಂದಿನ ದಿನಗಳಲ್ಲಿ ಅವರ ಬಲಿಷ್ಠ ಆಟ ಹಂತ ಹಂತವಾಗಿ ಬಯಲಾಗುವ ನಿರೀಕ್ಷೆ ಮನೆಮಾಡಿದೆ.