Back to Top

ಕಂಫರ್ಟ್ ಜೋನ್ ಬಿಟ್ಟು 'ಮೈಸಾ' ತೊಟ್ಟ ರಶ್ಮಿಕಾ: ಶಿವರಾಜ್ ಕುಮಾರ್ ಹೃದಯಸ್ಪರ್ಶಿ ಪ್ರತಿಕ್ರಿಯೆ!

SSTV Profile Logo SStv June 28, 2025
ಶಿವರಾಜ್ ಕುಮಾರ್ ಶುಭ ಹಾರೈಕೆ!
ಶಿವರಾಜ್ ಕುಮಾರ್ ಶುಭ ಹಾರೈಕೆ!

ಇದೀಗ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಹೊಸ ಸಿನಿಮಾ ‘ಮೈಸಾ’ ಸುದ್ದಿಯಲ್ಲಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ, ರಶ್ಮಿಕಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತವಾಡಿದ ಮುಖ, ಭಿನ್ನ ಶೈಲಿಯ ನೋಟದಿಂದ ಇದು ವಿಭಿನ್ನವಾದ ಸಿನಿಮಾ ಎಂದು ಸ್ಪಷ್ಟವಾಗುತ್ತದೆ.

ಈ ಹೊಸ ಪ್ರಯತ್ನಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಸಂದೇಶದಲ್ಲಿ, ವಿಭಿನ್ನ ಪ್ರಯತ್ನಗಳನ್ನು ಬೆಂಬಲಿಸುವುದು ಶೈಲಿಯೇ ಆಗಿರುವ ಶಿವಣ್ಣ, ರಶ್ಮಿಕಾ ಅವರಿಗೂ ಆಶೀರ್ವಾದ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ರಶ್ಮಿಕಾ, “ಶಿವಣ್ಣ ಸರ್, ನಿಮ್ಮ ಸಂದೇಶಕ್ಕೆ ಬಹಳ ಧನ್ಯವಾದಗಳು. ಹೆಮ್ಮೆಯ ಭಾವನೆ ಉಕ್ಕಿಬಂತು” ಎಂದು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

‘ಮೈಸಾ’ ಸಿನಿಮಾವನ್ನು ರವೀಂದ್ರ ಪುಲ್ಲೆ ನಿರ್ದೇಶಿಸುತ್ತಿದ್ದು, ಅಜಯ್ ಮತ್ತು ಅನಿಲ್ ಸಯ್ಯಪುರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ರಶ್ಮಿಕಾ ಇದೀಗ ಎರಡು ಹಿಂದಿ ಹಾಗೂ ಮೂರು ತೆಲುಗು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಈ ನಡುವೆ ‘ಮೈಸಾ’ ಕೂಡ ಸೇರಿಕೊಂಡಿದೆ.

ರಶ್ಮಿಕಾ ಮಂದಣ್ಣ ತಮ್ಮ ಕಂಫರ್ಟ್ ಜೋನ್ ಬಿಟ್ಟು ಹೊಸ ಪಾತ್ರಗಳತ್ತ ಹೆಜ್ಜೆ ಹಾಕುತ್ತಿರುವುದು ಅಭಿಮಾನಿಗಳಿಗೆ ಖುಷಿಯ ಸಂಗತಿ. ‘ಮೈಸಾ’ ಸಿನಿಮಾವೂ ಅವರ ನಟನಾ ಪ್ರಯಾಣದಲ್ಲಿ ಹೊಸ ಓರೆಯನ್ನ ತೋರಿಸಲಿದೆ.