Back to Top

‘ಚಪ್ಪಲಿಯಿಂದ ಹೊಡೀರಿ’ ಶಿಶಿರ್‌ಗೆ ಚೈತ್ರಾ ತೀವ್ರ ಚಾಲೆಂಜ್

SSTV Profile Logo SStv December 6, 2024
ಶಿಶಿರ್‌ಗೆ ಚೈತ್ರಾ ತೀವ್ರ ಚಾಲೆಂಜ್
ಶಿಶಿರ್‌ಗೆ ಚೈತ್ರಾ ತೀವ್ರ ಚಾಲೆಂಜ್
‘ಚಪ್ಪಲಿಯಿಂದ ಹೊಡೀರಿ’ ಶಿಶಿರ್‌ಗೆ ಚೈತ್ರಾ ತೀವ್ರ ಚಾಲೆಂಜ್ ಬಿಗ್ ಬಾಸ್ ಕನ್ನಡ 11 ನಲ್ಲಿ ಚೈತ್ರಾ ಕುಂದಾಪುರ ಹಾಗೂ ಶಿಶಿರ್ ಮಧ್ಯೆ ಮಾತಿನ ಸಮರ ಭಾರೀ ಚರ್ಚೆಗೆ ಕಾರಣವಾಗಿದೆ. ‘ಜೊಲ್ಲು, ಹೆಣ್ಣುಮಕ್ಕಳ ಹಿಂದೆ ತಿರುಗುತ್ತಾನೆ’ ಎಂಬ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪಕ್ಕೆ, ತ್ರಿವಿಕ್ರಮ್ ಆಕಾರಣವಾಗಿ ಚರ್ಚೆ ಉಂಟಾಗಿದೆ. ಚೈತ್ರಾ, "ನಾನು ಆ ಶಬ್ದ ಬಳಕೆ ಮಾಡಿಲ್ಲ. ಹೇಳಿದ್ದರೆ ಚಪ್ಪಲಿಯಿಂದ ಹೊಡೀರಿ" ಎಂದು ಶಿಶಿರ್‌ಗೆ ಚಾಲೆಂಜ್ ನೀಡಿದ್ರು. ಆದರೆ, ತ್ರಿವಿಕ್ರಮ್, ಚೈತ್ರಾ ಈ ಪದ ಬಳಸಿದ್ದಾರೆಂದು ಒತ್ತಿ ವಾದ ಮಾಡಿದರು. ಈ ಘಟನೆ ಶಿಶಿರ್‌ಗೆ ನೋವುಂಟುಮಾಡಿದ್ದು, ಮನೆಯಲ್ಲಿ ಇನ್ನಷ್ಟು ಬಿಕ್ಕಟ್ಟಿಗೆ ಕಾರಣವಾಗಿದೆ. ಚೈತ್ರಾ ನಿಜಕ್ಕೂ ಈ ಪದ ಬಳಕೆ ಮಾಡಿದ್ದಾರಾ ಅಥವಾ ಇಲ್ಲವೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ದೊರೆಯಬೇಕಿದೆ.