ಸಪ್ತಮಿ ಗೌಡ: ಮೊದಲ ತೆಲುಗು ಚಿತ್ರದ ಖುಷಿಯಲ್ಲಿ ಹೊಸ ಫೋಟೋ ಶೂಟ್ ಅಲ್ಲಿ ಸಖತ್ ಮಿಂಚಿಂಗ್!


‘ಕಾಂತಾರ’ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ನಟಿ ಸಪ್ತಮಿ ಗೌಡ ಈಗ ತಮ್ಮ ಮೊದಲ ತೆಲುಗು ಸಿನಿಮಾ ‘ತಮ್ಮುಡು’ ಬಿಡುಗಡೆ ಖುಷಿಯಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 4 ರಂದು ತೆರೆಕಾಣಲಿರುವ ಈ ಚಿತ್ರದ ಪ್ರಚಾರದಲ್ಲಿ ಸಪ್ತಮಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ಶೈಲಿಯುತ ಫೋಟೋ ಶೂಟ್‌ವೊಂದನ್ನೂ ಮಾಡಿದ್ದಾರೆ.
ಈ ಫೋಟೋಗಳಲ್ಲಿ ಸಪ್ತಮಿ ಕ್ರೀಮ್ ಬಣ್ಣದ ರಿಚ್ ಡ್ರೆಸ್ ತೊಟ್ಟು ವಿವಿಧ ರೀತಿಯ ಹಾವಭಾವಗಳನ್ನು ನೀಡಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ ಹಾಗೂ ಕಲರ್ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಅವರು ತಮ್ಮ ಈ ಪೋಟೋ ಶೂಟ್‌ನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, "ತಮ್ಮುಡು ರಿಲೀಸ್ ಜುಲೈ 4" ಎಂದು ತಿಳಿಸಿದ್ದಾರೆ.
‘ತಮ್ಮುಡು’ ಚಿತ್ರದಲ್ಲಿ ನಿತಿನ್ ನಾಯಕನಾಗಿ, ಸಪ್ತಮಿ ಡಿ-ಗ್ಲಾಮರ್ ಪಾತ್ರದಲ್ಲಿ ‘ರತ್ನ’ ಪಾತ್ರವನ್ನ ನಿರ್ವಹಿಸಿದ್ದಾರೆ. ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿರುವ ಸಪ್ತಮಿ, ಈಗ ಟಾಲಿವುಡ್ ಪ್ರೇಕ್ಷಕರ ಮನಗೂಳಿಸಲು ಸಜ್ಜಾಗಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
