ಹೊಸ ಸಾಹಸಕ್ಕೆ ಕೈಹಾಕಿದ 'ಬಿಗ್ ಬಾಸ್' ಖ್ಯಾತಿಯ ಸಾನ್ಯಾ ಅಯ್ಯರ್ – ಈಗ ಕಥೆ ಬರೆಯುತ್ತಿರುವ ನಿರ್ಧಾರ


ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ 'ಬಿಗ್ ಬಾಸ್' ಖ್ಯಾತಿಯ ಸಾನ್ಯಾ ಅಯ್ಯರ್, ಇದೀಗ ನಿರ್ದೇಶನದ ಕನಸು ಬೆಳೆಸುತ್ತಿದ್ದಾರೆ. ಈಗಾಗಲೇ ಅವರು ಒಂದು ಕಥೆ ಬರೆಯುತ್ತಿರುವುದಾಗಿ ಹೇಳಿದ್ದು, ಇದು ಅವರ ಬದುಕಿನಲ್ಲಿ ಹೊಸ ಅಧ್ಯಾಯವಾಗಿದೆ.
‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದ ಜನಮನ್ನಣೆ ಪಡೆದ ಸಾನ್ಯಾ, ಬಳಿಕ 'ಬಿಗ್ ಬಾಸ್' ಶೋ ಮೂಲಕ ಮನೆಮಾತಾದರು. ನಂತರ 'ಗೌರಿ' ಸಿನಿಮಾದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ಚಿತ್ರರಂಗದ ನಾನಾ ಆಯಾಮಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಾನ್ಯಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, "ಕಲಾವಿದರ ಜೀವನದಲ್ಲಿ ತಾಳ್ಮೆ ಅತ್ಯಗತ್ಯ. ಎಲ್ಲವೂ ನಮ್ಮ ಕೈಯಲ್ಲಿರೋದಿಲ್ಲ. ಈ ಸಮಯದಲ್ಲಿ ತಾಳ್ಮೆ ನಮ್ಮನ್ನು ಮುಂದೆ ಸಾಗಿಸುತ್ತೆ," ಎಂದು ಹೇಳಿದ್ದಾರೆ.
ಅವರು “ಡೈರೆಕ್ಷನ್ ಮಾಡುವ ಆಸೆ ಇದೆ. ಈಗ ಕಥೆ ಬರೆಯುತ್ತಿದ್ದೇನೆ. ಮುಂದೊಂದು ದಿನ ನಿರ್ದೇಶನವೂ ಮಾಡಬಹುದು” ಎಂದು ತಮ್ಮ ಭವಿಷ್ಯದ ಕನಸಿನತ್ತ ಇಂಗಿತ ನೀಡಿದ್ದಾರೆ. ಇದರಿಂದ ಸಾನ್ಯಾ ಅಯ್ಯರ್ ತಮ್ಮ ಅಭಿಮಾನಿಗಳಿಗೆ ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಅವರ ನಿರ್ದೇಶನದ ಕನಸು ಎಷ್ಟು ದೂರ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
