Back to Top

"ಆ ನಟನ ಜೊತೆ ನಟಿಸಬೇಡಿ ಅಂತ ಎಷ್ಟು ಜನ ಹೇಳಿದರು!" – ಸಂಜನಾ ಆನಂದ್‌ ಫಿಲ್ಮ್ ಇಂಡಸ್ಟ್ರಿ ಸತ್ಯ ಬಿಚ್ಚಿಟ್ಟರು

SSTV Profile Logo SStv July 23, 2025
ಸಂಜನಾ ಆನಂದ್‌ ಫಿಲ್ಮ್ ಇಂಡಸ್ಟ್ರಿ ಸತ್ಯ ಬಿಚ್ಚಿಟ್ಟರು
ಸಂಜನಾ ಆನಂದ್‌ ಫಿಲ್ಮ್ ಇಂಡಸ್ಟ್ರಿ ಸತ್ಯ ಬಿಚ್ಚಿಟ್ಟರು

'ಬ್ಯಾಂಗಲ್ ಬಂಗಾರಿ' ನಟಿ ಸಂಜನಾ ಆನಂದ್, ಇತ್ತೀಚೆಗೆ 'ಎಕ್ಕ' ಚಿತ್ರದ ಯಶಸ್ಸನ್ನು ಸವಿದಿರುವ ನಡುವೆಯೇ, ಚಿತ್ರರಂಗದ ತಮ್ಮ ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ರ್ಯಾಪಿಡ್ ರಶ್ಮಿ’ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಂಜನಾ, "ನಾನು ಆರಂಭದಲ್ಲಿ ಎಲ್ಲರನ್ನೂ ಬೇಗ ನಂಬುತ್ತಿದ್ದೆ. ಯಾರೋ ಏನಾದರೂ ಹೇಳಿದ್ರೆ ನಂಬಿ, ವ್ಯಕ್ತಿಗಳ ಜೊತೆಗಿನ ಸಂಪರ್ಕವನ್ನೇ ಕಡಿತ ಮಾಡುತ್ತಿದ್ದೆ. ನಂತರ ಎಲ್ಲರದ್ದೂ ಎರಡು ಮುಖಗಳಿರುತ್ತವೆ ಅನ್ನೋದು ಗೊತ್ತಾಯ್ತು," ಎಂದಿದ್ದಾರೆ.

ಅವರು ಹಂಚಿಕೊಂಡ ಮತ್ತೊಂದು ಅನುಭವ – "ಒಬ್ಬ ನಟನೊಂದಿಗೆ ನಾನು ಸಿನಿಮಾ ಮಾಡುತ್ತಿದ್ದಾಗ, ಅನೇಕರು ಅವರ ಬಗ್ಗೆ ಕೆಟ್ಟದಾಗಿ ಹೇಳಿ, ಅವರ ಜೊತೆ ನಟಿಸಬೇಡಿ, ಸೇಫ್ ಇಲ್ಲ ಅಂದಿದ್ದರು. ಆದರೆ ಅದು ನನ್ನ ಅತ್ಯಂತ ಸೇಫ್ ಮತ್ತು ಉತ್ತಮ ಅನುಭವದ ಚಿತ್ರವಾಗಿತ್ತು."

ಅಲ್ಲದೆ, ಇಂಡಸ್ಟ್ರೀಯಲ್ಲಿನ ತೊಂದರೆಗೂ ನೇರವಾಗಿ ತಲೆಕೊಟ್ಟ ಅನುಭವವನ್ನೂ ಹಂಚಿಕೊಂಡ ಸಂಜನಾ, "ಒಂದು ಚಿತ್ರ ತಂಡವನ್ನು ನಾನು ಕುಟುಂಬವನ್ನೇ ಎಂದು ನಂಬಿದ್ದೆ. ಆದರೆ ಅವರು ನನಗೆ ಪೇಮೆಂಟ್ ಕೊಡಲೇ ಇಲ್ಲ. ಆಗ ನನ್ನ ಬಳಿ ಹಣ ಇರಲಿಲ್ಲ, ನಾನು ಐಟಿ ಕೆಲಸವನ್ನೇ ಬಿಟ್ಟುಬಿಟ್ಟಿದ್ದೆ," ಎಂದು ಭಾವುಕವಾಗಿ ಹೇಳಿದರು.

ಇಂತಹ ಅಡಚಣೆಗಳ ನಡುವೆಯೂ ನಂಬಿಕೆಯಿಂದ ಮುಂದೆ ಸಾಗುತ್ತಿರುವ ಸಂಜನಾ, ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.