ಸಂಗೀತಾ ಶೃಂಗೇರಿಯ ಜಬರ್ದಸ್ತ್ ವರ್ಕೌಟ್ ವಿಡಿಯೋ ವೈರಲ್ – ಹೊಸ ಚಿತ್ರಕ್ಕೆ ಸಿದ್ಧತೆ?


'ಚಾರ್ಲಿ' ಸಿನಿಮಾದ ಮೂಲಕ ಪ್ರಖ್ಯಾತಿಗೆ ಬಂದ ನಟಿ ಸಂಗೀತಾ ಶೃಂಗೇರಿ ಇದೀಗ ಮತ್ತೆ ಫಿಟ್ನೆಸ್ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ಬಾರಿ ಸಿಕ್ಸ್ ಪ್ಯಾಕ್ ಅಷ್ಟೇ ಅಲ್ಲ, ಮಸಲ್ ಬಿಲ್ಡ್ ಮಾಡೋ ಜೋರಿನಲ್ಲಿ ವರ್ಕೌಟ್ಸ್ ಮಾಡ್ತಿದ್ದಾರೆ. ಸಂಗೀತಾ ಹಂಚಿಕೊಂಡಿರುವ ಈ ವರ್ಕೌಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅವರು ಬೈಸೆಪ್ಸ್ ಮತ್ತು ಬ್ಯಾಕ್ ವರ್ಕೌಟ್ ಮಾಡುತ್ತಿರುವ ದೃಶ್ಯಗಳು ಸಖತ್ ಎನರ್ಜಿ ಮೂಡಿಸುತ್ತಿವೆ. ಈ ಮೂಲಕ ನಾನೂ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿ ನೀಡುತ್ತಿರುವ ಸಂಗೀತಾ, ಈ ತಯಾರಿ ಯಾವ ಚಿತ್ರದ ಮೇಲೆ ಎನ್ನುವುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
2016 ರಿಂದ 2024 ರವರೆಗೆ ಒಟ್ಟು 9 ಚಿತ್ರಗಳಲ್ಲಿ ಅಭಿನಯಿಸಿರುವ ಸಂಗೀತಾ, '777 ಚಾರ್ಲಿ' ಸಿನಿಮಾದಿಂದ ವಿಶೇಷ ಗಮನ ಸೆಳೆದಿದ್ದರು. ಕನ್ನಡ ಬಿಗ್ ಬಾಸ್ ಸೀಸನ್ 10 ಕೂಡ ಭಾಗವಹಿಸಿದ್ದ ಈ ನಟಿಯ ಹೊಸ ಫಿಟ್ನೆಸ್ ಅವತಾರ ಈಗ ಎಲ್ಲರ ಕಣ್ಣಿಗೆ ಬೀಳುತ್ತಿದೆ. ಅಭಿಮಾನಿಗಳು ಈಗಾಗಲೇ ಕಾತುರದಿಂದ ಈ ಸಿದ್ಧತೆ ಯಾವ ಚಿತ್ರಕ್ಕೆ ಎಂಬುದನ್ನು ತಿಳಿಯಲು ಕಾಯುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
