ಸೈಯಾರಾ ನೋಡಿ ಹುಚ್ಚಾಗಿ ಹೋದ ಪ್ರೇಮಿಗಳು! ಥಿಯೇಟರ್‌ಗಳಲ್ಲಿ ಶರ್ಟ್ ಬಿಚ್ಚಿ ಕುಣಿಯುತ್ತಿರುವ ಪ್ರೇಮಿಗಳು!


ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ರೊಮ್ಯಾಂಟಿಕ್ ಸಿನಿಮಾ 'ಸಯ್ಯಾರಾ' ಪ್ರೇಮಿಗಳಿಗೆ ಹುಚ್ಚೆಬ್ಬಿಸುವಂತೆ ಮಾಡಿದೆ. ಭಾವನಾತ್ಮಕ ಪ್ರೇಮಕಥೆ ಹೊಂದಿರುವ ಈ ಸಿನಿಮಾ, ಹೊಸತಾಗಿದ್ದರೂ ಸಿನಿರಸಿಕರಲ್ಲಿ ಅಪಾರ ಕ್ರೇಜ್ ಹುಟ್ಟಿಸಿದೆ. ಜೆನ್ Z ಯುವಕರನ್ನು ಆಳವಾಗಿ ತಟ್ಟಿರುವ ಈ ಕಥೆ, ಮೋಹಿತ್ ಸೂರಿ ನಿರ್ದೇಶನದತ್ತ ಗಮನ ಸೆಳೆಯುತ್ತಿದೆ.
ನಾಯಕನಾಗಿ ಅಭಿನಯಿಸಿರುವ ಅಹಾನ್ ಪಾಂಡೆ, ಮೊದಲ ಸಿನಿಮಾದಲ್ಲೇ ಧಮಾಕಾ ಮಾಡಿದ್ದಾನೆ. ಅವನ ಭೂಮಿಕೆಯೊಳಗೆ ನುಗ್ಗಿದ ಪ್ರೇಕ್ಷಕರು, ಥಿಯೇಟರ್‌ನಲ್ಲಿ ಶರ್ಟ್ ಬಿಚ್ಚಿ ಕುಣಿಯುವ ತನಕ ಎಕ್ಸ್‌ಪ್ರೆಷನ್ ನೀಡಿದ್ದಾರೆ. ತಂಗಿ ಅನನ್ಯಾ ಪಾಂಡೆಗೆ ಹಿಂದೆಯೂ ಹಿಟ್‌ಗಾಗಿ ಕಾಯುತ್ತಿದ್ದರೆ, ಅಣ್ಣ ಅಹಾನ್ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದಾನೆ.
ಹಿರೋಯಿನ್ ಅನೀತ್ ಪಡ್ಡಾ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದಡಿದ್ದಾಳೆ. ಆಕೆಯ ಮುಖದ ಮುದ್ದು ನಗು, ನಿರಾಕರಿಸದ ಭಾವನೆಗಳ ಸರಣಿ ಪ್ರೇಕ್ಷಕರನ್ನು ಅವಳ ಫ್ಯಾನ್‌ಮಾಡಿದೆ.
ಹಾಡುಗಳೂ ಚಿತ್ರದ ಮತ್ತೊಂದು ಆಕರ್ಷಣೆಯಾಗಿದೆ. ಹೃದಯವನ್ನ ತಾಗುವ ಹಾಡುಗಳು ಸಿನಿಮಾ ಮತ್ತಷ್ಟು ಎಮೋಷನಲ್ ಮಾಡುತ್ತವೆ. ಈ ಎಲ್ಲದರಿಂದಾಗಿ 'ಸಯ್ಯಾರಾ' ಚಿತ್ರಮಂದಿರಗಳಲ್ಲಿ ಸಂಭ್ರಮದ ಜಾತ್ರೆಯೇ ಸೃಷ್ಟಿಸಿದೆ.
ಒಟ್ಟಾರೆ, ಸಯ್ಯಾರಾ ಒಂದು ಶುದ್ಧ ಪ್ರೇಮಕಥೆಯ ಸೆಲೆಬ್ರೇಷನ್. ಹೊಸಬರ ಸಿನಿಮಾ ಇದ್ದರೂ, ಎಲ್ಲರ ಮನ ಗೆದ್ದಿರುವ ಈ ಚಿತ್ರ, ಬಹುಭಾಷಿಕ ಸಿನಿ ಪ್ರೇಮಿಗಳ ಹೃದಯದಲ್ಲಿ ಸ್ಥಾನ ಪಡೆಯುತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
