Back to Top

ಎಸ್ ಎಂ ಕೃಷ್ಣ ನಿಧನದಿಂದ ನನಗೆ ಮಾನಸಿಕವಾಗಿ ತುಂಬಾ ನೋವಾಗಿದ ಕಣ್ಣೀರಿಟ್ಟ ನಟಿ ರಮ್ಯಾ

SSTV Profile Logo SStv December 10, 2024
ಎಸ್ ಎಂ ಕೃಷ್ಣ ನಿಧನದಿಂದ ನನಗೆ ತುಂಬಾ ನೋವಾಗಿದ ಕಣ್ಣೀರಿಟ್ಟ ನಟಿ ರಮ್ಯಾ
ಎಸ್ ಎಂ ಕೃಷ್ಣ ನಿಧನದಿಂದ ನನಗೆ ತುಂಬಾ ನೋವಾಗಿದ ಕಣ್ಣೀರಿಟ್ಟ ನಟಿ ರಮ್ಯಾ
ಎಸ್ ಎಂ ಕೃಷ್ಣ ನಿಧನದಿಂದ ನನಗೆ ಮಾನಸಿಕವಾಗಿ ತುಂಬಾ ನೋವಾಗಿದ ಕಣ್ಣೀರಿಟ್ಟ ನಟಿ ರಮ್ಯಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಇಂದು ವಿಧಿವಶರಾದರು. 1932ರಲ್ಲಿ ಜನ್ಮಗೊಂಡ ಕೃಷ್ಣ ಅವರು ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ವಿದೇಶಾಂಗ ಸಚಿವರಾಗಿ ಪ್ರಮುಖ ಪದವಿಗಳನ್ನು ಹೊಂದಿದ್ದರು. ಬಹುಕಾಲ ಕಾಂಗ್ರೆಸ್ ಪಕ್ಷದಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿದ ಕೃಷ್ಣ ಅವರು 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಅಂತಿಮ ನಮನ ಸಲ್ಲಿಸಿದರು. "ಎಸ್.ಎಂ. ಕೃಷ್ಣ ಅಜ್ಜಿಯವರ ಬಗ್ಗೆ ನನಗೆ ಬಹಳ ಗೌರವವಿದೆ, ಅವರು ನನ್ನನ್ನು ರಾಜಕಾರಣಕ್ಕೆ ಕರೆತಂದವರು" ಎಂದು ರಮ್ಯಾ ಕಣ್ಣೀರಿನಿಂದ ಹೇಳಿಕೊಂಡರು. "ಇಂತಹ ಸಮಯದಲ್ಲಿ ನಾನು ಮಾತನಾಡಲು ಸಿದ್ಧಳಿಲ್ಲ, ಇದು ನನಗೆ ಆಘಾತ ತಂದಿದೆ," ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಅವರು ವೈದೇಹಿ ಮತ್ತು ಮಣಿಪಾಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಉಲ್ಬಣಗೊಂಡ ಕಾರಣ ಅವರು ಇಂದು ಕೊನೆಯುಸಿರೆಳೆದರು. ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದ ಕರ್ನಾಟಕ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಶೂನ್ಯ ಉಂಟಾಗಿದೆ.