ರೌಡಿಸಂ ಮಾಡಿದ ರಜತ್ ಹೆಣ್ಮಕ್ಕಳನ್ನೂ ತಳ್ಳಿದ್ದಕ್ಕೆ ಜೋರಾಯ್ತು ವಿವಾದ


ರೌಡಿಸಂ ಮಾಡಿದ ರಜತ್ ಹೆಣ್ಮಕ್ಕಳನ್ನೂ ತಳ್ಳಿದ್ದಕ್ಕೆ ಜೋರಾಯ್ತು ವಿವಾದ ಬಿಗ್ ಬಾಸ್ ಕನ್ನಡ ಮನೆಯಲ್ಲಿಂದು ರಜತ್ ಅವರ ವರ್ತನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅವರ ಗಂಡ್ಸು ವರ್ತನೆ, ಅನಗತ್ಯ ಅಗ್ರೆಷನ್ ಮತ್ತು ಸಹ ಸದಸ್ಯರ ಮೇಲೆ ಭುಜಬಲ ಪ್ರದರ್ಶನ ಮನೆಯಲ್ಲಿ ಕಿರಿಕ್ ಹೆಚ್ಚಿಸಿದೆ. ಡಿಸೆಂಬರ್ 17ರ ಸಂಚಿಕೆಯಲ್ಲಿ ರಜತ್ ಅವರು ಚೈತ್ರಾ ಕುಂದಾಪುರ ಮತ್ತು ಇತರ ಸದಸ್ಯರೊಂದಿಗೆ ನಡೆಸಿದ್ದಾರೆ.
ಚೈತ್ರಾ ಕುಂದಾಪುರ ಹಾಗೂ ರಜತ್ ನಡುವೆ ಟಾಸ್ಕ್ ವೇಳೆ ಮಾತಿನ ಚಕಮಕಿ ನಡೆದಿದ್ದು, ಸನ್ನಿವೇಶ ಕೈ ಮೀರಿದೆ. ತಾಳ್ಮೆ ಕಳೆದುಕೊಂಡ ರಜತ್ ಅವರು ಚೈತ್ರಾಳ ಮೇಲೆ ಕೈ ಮಾಡಲು ಪ್ರಯತ್ನಿಸಿದರು, ಇದರಿಂದ ವಿವಾದ ತೀವ್ರಗೊಂಡಿದೆ. ಚೈತ್ರಾ ವಿರುದ್ಧ ಬಳಸಿದ ಅಕ್ರಮ ಮಾತುಗಳು ಮತ್ತು ಕೈ ಮುಟ್ಟಿದ ಘಟನೆಗೆ ಸಂಬಂಧಿಸಿದಂತೆ ಮನೆ ಸದಸ್ಯರು ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಈ ಘಟನೆಗೆ ಮಧ್ಯ ಪ್ರವೇಶಿಸಿದ ಮೋಕ್ಷಿತಾ, ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರೂ ಜಗಳ ನಿಂತಿಲ್ಲ. ಚೈತ್ರಾ ಅವರು “ಮೈ ಮುಟ್ಟಿದ್ದಕ್ಕೆ ಖಂಡಿತ ಉತ್ತರ ಕೊಡುತ್ತೇನೆ” ಎಂದು ರಜತ್‌ಗೆ ಸವಾಲು ಹಾಕಿದ್ದು, ಮನೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಟಾಸ್ಕ್‌ನಲ್ಲಿ ಸೋತ ಬಳಿಕ, ಮನೆ ಸದಸ್ಯರು ರಜತ್ ಅನ್ನು ನಾಮಿನೇಟ್ ಮಾಡಿದರೂ, ಅವರ ವರ್ತನೆ ಬದಲಾಗಿಲ್ಲ. “ನಾನು ಹೀಗೆ ಇದ್ದೇ ಇರುತ್ತೇನೆ” ಎಂಬ ರಜತ್ ಅವರ ಸಮರ್ಥನೆ ಅಭಿಮಾನಿಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಈ ವರ್ತನೆಗೆ ಕಿಚ್ಚ ಸುದೀಪ್ ಅವರು ವೀಕೆಂಡ್ ವಾರದ ಸಂದರ್ಭ ಎಚ್ಚರಿಕೆ ನೀಡಬಹುದೆಂಬ ನಿರೀಕ್ಷೆಯಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
