ರಿಷಬ್ ಶೆಟ್ಟಿ ಜನ್ಮದಿನಕ್ಕೆ ಪತ್ನಿಯಿಂದ ಹೃದಯಸ್ಪರ್ಶಿ ಸಂದೇಶ – ಫ್ಯಾನ್ಸ್ ಫುಲ್ ಎಮೋಷನಲ್!
SStv
July 7, 2025
ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ 42ನೇ ಜನ್ಮದಿನವನ್ನು ಜುಲೈ 7ರಂದು ಆಚರಿಸಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಪತ್ನಿ ಪ್ರಗತಿ ಶೆಟ್ಟಿ ಅವರು ಭಾವುಕ ಸಂದೇಶದ ಮೂಲಕ ಪತಿಗೆ ವಿಶೇಷವಾಗಿಯೇ ಶುಭಾಶಯ ತಿಳಿಸಿದ್ದಾರೆ.
ಪ್ರಗತಿ ಶೆಟ್ಟಿ, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಕ್ಕಳೊಡನೆ ರಿಷಬ್ ಶೆಟ್ಟಿಯೊಂದಿಗೆ ತೆಗೆದ ಮೂರು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಕುಟುಂಬದ ಬಾಂಧವ್ಯವನ್ನು ಸ್ಪಷ್ಟಪಡಿಸುತ್ತದೆ. ಈ ಪೋಸ್ಟ್‌ನಲ್ಲಿ ಅವರು ತಮ್ಮ ಪತಿಯ ಬಗ್ಗೆ ಬರೆದಿರುವ ಪ್ರೀತಿ ಮತ್ತು ಗೌರವಪೂರ್ಣ ಸಾಲುಗಳು ನೆಟ್ಟಿಗರ ಮನಗೆದ್ದಿವೆ.
"ನೀನು ನನ್ನ ಶಕ್ತಿ, ನನ್ನ ಶಾಂತಿ, ನನ್ನ ಶಾಶ್ವತ ಪ್ರೇರಣೆ. ಜೀವನದಲ್ಲಿ ನಾನೇಕೆ ಹೆಮ್ಮೆಪಡುವೆ ಅಂದ್ರೆ, ನನ್ನ ಮಕ್ಕಳಿಗೆ ನೀನು ಅತಿದೊಡ್ಡ ಆದರ್ಶ ತಂದೆ. ನಿನ್ನ ಈ ಪಯಣದಲ್ಲಿ ನಾನು ನಿನ್ನ ಜೊತೆಯಲ್ಲಿರುವೆ ಎಂಬುದೇ ನನ್ನ ಗೆಲುವು" ಎಂದು ಪ್ರಗತಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.
ಈ ಪೋಷ್ಟ್ ನಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿಗೆ ಭರ್ಜರಿ ಹಾರೈಕೆಗಳನ್ನು ತಿಳಿಸಿದ್ದಾರೆ. ಅವರ ದಾಂಪತ್ಯದ ಪ್ರೀತಿ ಹಾಗೂ ಬಾಂಧವ್ಯವು ಅಭಿಮಾನಿಗಳಿಗೆ ಪ್ರೇರಣೆಯಾದಂತಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
