ರತನ್ ಟಾಟಾ ಮಾದರಿಯಲ್ಲಿ ನಿತ್ಯಾ ಮೆನನ್ – “ಮದುವೆ ಅಲ್ಲ, ಬ್ಯಾಚುಲರ್ ಲೈಫ್ ಆಯ್ತ್ ಫೈನಲ್!”


ಮೈನಾ ಹಾಗೂ ಕೋಟಿಗೊಬ್ಬ-2 ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ನಿತ್ಯಾ ಮೆನನ್ ಇದೀಗ ಒಂದು ಶಾಕಿಂಗ್ ನಿರ್ಧಾರದಿಂದ ಸುದ್ದಿಯಾಗಿದ್ದಾರೆ. “ನಾನು ಮದುವೆಯಾಗಲ್ಲ, ಜೀವನಪೂರ್ತಿ ಬ್ಯಾಚುಲರ್ ಆಗಿ ಉಳಿಯುತ್ತೇನೆ” ಎಂಬ ಹೇಳಿಕೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತೀಚೆಗಿನ ತಲೈವಾನ್ ತಲೈವಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆ ಈ ನಿರ್ಧಾರವನ್ನು ಬಹಿರಂಗಪಡಿಸಿರುವ ನಿತ್ಯಾ, ಉದ್ಯಮಿ ರತನ್ ಟಾಟಾ ಅವರ ಜೀವನದ ಶೈಲಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಲಯಾಳಂ ಮೂಲದ ಬೆಂಗಳೂರಿನ ಹುಡುಗಿ ನಿತ್ಯಾ, ಬಾಲನಟಿಯಾಗಿ ಬದುಕು ಆರಂಭಿಸಿ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಭಾಷೆಗಳಲ್ಲಿಯೇ ನಟಿಸಿ, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಆದರೆ, ಮದುವೆ ಕುರಿತಂತೆ ಹೊಂದಿರುವ ನಿರಾಶೆ, ಒತ್ತಡ, ವೈಯಕ್ತಿಕ ಪ್ರೇಮದ ವಿಫಲತೆ ಮತ್ತು ಬದಲಾಗಿರುವ ಜೀವನ ಶೈಲಿ ಈ ನಿರ್ಧಾರಕ್ಕೆ ಕಾರಣವೆಂದು ಅಭಿಪ್ರಾಯ ವ್ಯಕ್ತವಾಗಿದೆ. ನಿತ್ಯಾ ಮೆನನ್ ಈ ನಿರ್ಧಾರದಿಂದ ಅಭಿಮಾನಿಗಳು ಸ್ವಲ್ಪ ಬೇಸರಗೊಂಡಿದ್ದರೂ, ಅವರ ತೀರ್ಮಾನಕ್ಕೆ ಗೌರವ ಸಲ್ಲಿಸುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
