'ರಣವಿಕ್ರಮ' ಬೆಡಗಿ ಅದಾ ಶರ್ಮಾ ಹೊಸ ಫೋಟೋ ಶೂಟ್ ವೈರಲ್! – ಅದಾ ಶರ್ಮಾ ಕ್ರಿಯೇಟಿವಿಟಿಗೆ ಫ್ಯಾನ್ಸ್ ಶಾಕ್!


ಬಾಲಿವುಡ್ ಹಾಗೂ ಸ್ಯಾಂಡಲ್ವುಡ್‌ದಲ್ಲಿ ಹೆಸರಾಗಿರುವ ನಟಿ ಅದಾ ಶರ್ಮಾ, ಕ್ರಿಯೇಟಿವಿಟಿ ಮತ್ತು ವಿಭಿನ್ನ ಶೈಲಿಯ ಪ್ರತಿಕೆಯಾಗಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ. ಕೈಯಲ್ಲಿ ಮಾಸ್ಕ್ ಹಿಡಿದಿರುವುದೂ ಇದೆ, ಅಸ್ಥಿಪಂಜರದ (skeleton) ಜೊತೆ ಪೋಸ್ ಕೊಟ್ಟಿರುವ ದೃಶ್ಯವೂ ಇದೆ ಇವೆಲ್ಲವೂ ಒಂದು ವಿಭಿನ್ನ ಕಲಾತ್ಮಕ ದೃಷ್ಟಿಕೋಣವನ್ನ ಪ್ರತಿಬಿಂಬಿಸುತ್ತವೆ.
‘ರಣವಿಕ್ರಮ’ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ಅದಾ ಶರ್ಮಾ, ಚಿತ್ರರಂಗದಲ್ಲಿಯೇ ಹೊಸ ರೀತಿಯ ಕ್ರಿಯೇಟಿವಿಟಿಗೆ ಹೆಸರುವಾಸಿ. ಯೋಗಾಸನ, ನೃತ್ಯ, ಅನೇಕ ವಿನೂತನ ಡ್ರೆಸ್ ವಿನ್ಯಾಸಗಳು ಈ ಎಲ್ಲವನ್ನೂ ವೈಯಕ್ತಿಕ ಶೈಲಿಯಲ್ಲಿ ಸಜೀವಗೊಳಿಸುತ್ತಾರೆ. ಮರಕ್ಕೆ ಹಗ್ಗ ಕಟ್ಟಿಕೊಂಡು ಯೋಗ ಮಾಡುವುದರಿಂದ ಹಿಡಿದು, ಬೆಕ್ಕಿನ ಫೋಟೋಗಳನ್ನು ವಿನ್ಯಾಸದೊಂದಿಗೆ ಹಂಚಿಕೊಳ್ಳುವ ತನಕ, ಅವರ ಪ್ರತಿ ಕೆಲಸದಲ್ಲಿ ವಿಶಿಷ್ಟ ಶೈಲಿ ಮೂಡಿಬರುತ್ತದೆ.
ಅದಾ ಶರ್ಮಾ ತಮ್ಮ ಹೊಸ ಫೋಟೋಶೂಟ್‌ಗಳಲ್ಲಿ ಕೇವಲ ಡ್ರೆಸ್‌ಗಳಿಂದಷ್ಟೇ ಅಲ್ಲ, ತಮ್ಮ ಎಕ್ಸ್‌ಪ್ರೆಷನ್‌ಗಳ ಮೂಲಕವೂ ಶಕ್ತಿಯುತ ಪ್ರಸ್ತುತಿ ನೀಡಿದ್ದಾರೆ. ಕೆಲವೊಂದು ಫೋಟೋಗಳಲ್ಲಿ ಅವರು ಬೆದರಿಸುವ ರೀತಿಯಲ್ಲಿ ಕಾಣಿಸಿಕೊಂಡರೂ, ಇನ್ನೊಂದೆಡೆ ಆರ್ಥಪೂರ್ಣವಾದ ಕಲಾತ್ಮಕ ಶೈಲಿ ಸ್ಪಷ್ಟವಾಗುತ್ತದೆ.
ಅದಾ ಶರ್ಮಾ ಕನ್ನಡದ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಜೊತೆ 'ರಣವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ಅವರು ಪುನೀತ್ ಅವರ ಸರಳತೆಗೆ ಮಾರುಹೋಗಿದ್ದು, “ಅವರ ನಡವಳಿಕೆಯಿಂದ ಜೀವನ ಪಾಠಗಳನ್ನು ಕಲಿತೆ” ಎಂದೂ ಅವರು ಹೇಳಿದ್ದರು. ಈ ಎಲ್ಲದನ್ನೂ ನೋಡಿ ಅಭಿಮಾನಿಗಳು “ಅದಾ ಶರ್ಮಾ = ಕ್ರಿಯೇಟಿವ್ ಜೀನಿಯಸ್” ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯುತ್ತರ ನೀಡುತ್ತಿದ್ದಾರೆ. ಹಲವರು ಅವರನ್ನು “ಬಾಲಿವುಡ್‌ನ ಉಪೇಂದ್ರ” ಎಂದೂ ಹೋಲಿಸಿದ್ದಾರೆ!
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
