Back to Top

"ಸೈಬರ್ ಸೆಕ್ಯೂರಿಟಿ ಬಲವಾಗಬೇಕು, ಇಲ್ಲದಿದ್ರೆ ಮತ್ತೊಂದು ರೇಣುಕಾಸ್ವಾಮಿ ಕೇಸ್!" - ರಮ್ಯಾ ಪರ ಗರ್ಜಿಸಿದ ವಿನಯ್ ಗೌಡ

SSTV Profile Logo SStv July 31, 2025
ರಮ್ಯಾ ಪರ ಗರ್ಜಿಸಿದ ವಿನಯ್ ಗೌಡ
ರಮ್ಯಾ ಪರ ಗರ್ಜಿಸಿದ ವಿನಯ್ ಗೌಡ

ನಟ ದರ್ಶನ್ ಅಭಿಮಾನಿಗಳಿಂದ ನಟಿ ರಮ್ಯಾಗೆ ಆಗಿದ್ದ ಸಾಮಾಜಿಕ ಮಾಧ್ಯಮ ದೌರ್ಜನ್ಯದ ವಿಷಯ ಇದೀಗ ಇಡೀ ರಾಜ್ಯದ ಚರ್ಚೆಯ ವಿಷಯವಾಗಿದ್ದು, ಚಿತ್ರರಂಗದಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ 'ಬಿಗ್ ಬಾಸ್' ಖ್ಯಾತಿಯ ನಟ ವಿನಯ್ ಗೌಡ ಕೂಡ ರಮ್ಯಾ ಪರ ನಿಂತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿನಯ್ ಗೌಡ ಹೇಳಿದ್ದು, "ರಮ್ಯಾ ಮೇಡಂ ಅವರ ಮಾತಿನಲ್ಲಿ ತಪ್ಪೇನಿಲ್ಲ. ಫೇಕ್ ಅಕೌಂಟ್‌ಗಳಿಂದ ಕೆಟ್ಟ ಮೆಸೇಜ್‌ ಮಾಡುವವರೆಲ್ಲ ನಿಜವಾದ ಅಭಿಮಾನಿಗಳಲ್ಲ. ಹೆಣ್ಣುಮಕ್ಕಳಿಗೆ ಈ ರೀತಿ ಸಂದೇಶ ಕಳುಹಿಸುವವರು ಗೌರವಪೂರ್ಣ ವ್ಯಕ್ತಿಗಳಲ್ಲ. ಇಂಥವರನ್ನು ಜೈಲಿಗೆ ಹಾಕಬೇಕು" ಎಂಬುದಾಗಿ ಅವರು ಹೇಳಿದ್ದಾರೆ.

ಇನ್ನು ಫೇಕ್ ಅಕೌಂಟ್‌ಗಳೇ ಇಂತಹ ತೊಂದರೆಗಳಿಗೆ ಮೂಲ ಕಾರಣವೆಂದು ತಿಳಿಸಿದ್ದಾರೆ. “ಒಬ್ಬರನ್ನಾದರೂ ಕಾನೂನಿನ ಮೂಲಕ ಶಿಕ್ಷೆ ನೀಡಿದರೆ ಇತರರು ಎಚ್ಚೆತ್ತುಕೊಳ್ಳುತ್ತಾರೆ. ಸೈಬರ್ ಸೆಕ್ಯೂರಿಟಿ ಮತ್ತಷ್ಟು ಬಲವಾಗಬೇಕು” ಎಂಬ ವಿನಂತಿಯನ್ನೂ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡುತ್ತಿರುವ ಫೇಕ್ ಅಕೌಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯ.