Back to Top

ಮಾಲ್ಡೀವ್ಸ್‌ ಸಮುದ್ರ ತೀರದಲ್ಲಿ ರಾಜವರ್ಧನ್ – ದಿವ್ಯ ದಂಪತಿ ಆನಿವರ್ಸರಿ ಸೆಲೆಬ್ರೇಷನ್!

SSTV Profile Logo SStv August 6, 2025
ರಾಜವರ್ಧನ್ – ದಿವ್ಯ ದಂಪತಿಯ ಆನಿವರ್ಸರಿ ಸೆಲೆಬ್ರೇಷನ್
ರಾಜವರ್ಧನ್ – ದಿವ್ಯ ದಂಪತಿಯ ಆನಿವರ್ಸರಿ ಸೆಲೆಬ್ರೇಷನ್

ಸ್ಯಾಂಡಲ್‌ವುಡ್ ನಟ ರಾಜವರ್ಧನ್ ಮತ್ತು ಅವರ ಪತ್ನಿ ದಿವ್ಯ, ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಮಾಲ್ಡೀವ್ಸ್‌ನ ಸುಂದರ ಕಡಲ ತೀರದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ಕ್ಷಣಗಳನ್ನು ಫೋಟೋಗಳ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಸಿನಿಮಾ ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿರುವ ರಾಜವರ್ಧನ್, "ಬಿಚ್ಚುಗತ್ತಿ", "ಹಿರಣ್ಯ" ಮತ್ತು ಇತ್ತೀಚಿನ "ಗಜರಾಮ" ಸಿನಿಮಾದಲ್ಲಿ ಮಿಂಚಿದ್ದಾರೆ. ಇದೀಗ ಅವರು "ಜಾವಾ" ಚಿತ್ರದಲ್ಲಿ ಬ್ಯುಸಿಯಾಗಿದ್ದರೂ, ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ.

ವಿವಾಹ ವಾರ್ಷಿಕೋತ್ಸವದ ವಿಶೇಷ ದಿನವನ್ನು ವಿಶೇಷ ತಾಣದಲ್ಲಿ ಕಳೆಯಲು ವಿದೇಶಕ್ಕೆ ಹಾರಿರುವ ಈ ದಂಪತಿ, ತಮ್ಮ ಪ್ರೀತಿಯ ಮನೋಭಾವವನ್ನು ಮಾಲ್ಡೀವ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.