Back to Top

‘ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸ್ತೀನಿ’ ರಜತ್ vs ಚೈತ್ರಾ ಜಗಳ ತೀವ್ರತೆಗೆ

SSTV Profile Logo SStv November 27, 2024
ರಜತ್ vs ಚೈತ್ರಾ ಜಗಳ ತೀವ್ರತೆಗೆ
ರಜತ್ vs ಚೈತ್ರಾ ಜಗಳ ತೀವ್ರತೆಗೆ
ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸ್ತೀನಿ’ ರಜತ್ vs ಚೈತ್ರಾ ಜಗಳ ತೀವ್ರತೆಗೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಮತ್ತು ರಜತ್ ಸುರೇಶ್ ನಡುವಿನ ವಾಗ್ವಾದ ತೀವ್ರವಾಗಿದ್ದು, ನಾಮಿನೇಷನ್ ಪ್ರಕ್ರಿಯೆ ಹಿನ್ನೆಲೆಯಾಗಿದೆ. ಚೈತ್ರಾ ರಜತ್ ಅವರನ್ನು ‘ಬಾಸ್’ ಎಂದು ವ್ಯಂಗ್ಯ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ ನಾಮಿನೇಟ್ ಮಾಡಿದ್ದು, ಇದಕ್ಕೆ ರಜತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜತ್ ಸವಾಲ್ “ನಾನು ಗೌರವದಿಂದ ಬಾಸ್ ಅಂತ ಕರೆಯುತ್ತೇನೆ. ನೀವು ನೀಡಿರುವ ಕಾರಣ ಕ್ಷುಲ್ಲಕ. ಸುದೀಪ್ ಸರ್ ಇದು ಸರಿಯೆಂದರೆ ನಾನು ಅರ್ಧ ಮೀಸೆ ಬೋಳಿಸಿಕೊಂಡು ಮನೆಯಿಂದ ಹೊರಹೋಗುತ್ತೇನೆ” ಎಂದು ರಜತ್ ಸವಾಲ್ ಹಾಕಿದರು. ಮಂಗಳಾರತಿ, ಅದೇ ರಾಗ ಕಳೆದ ವೀಕೆಂಡ್‌ ಕಿಚ್ಚ ಸುದೀಪ್‌ ನಾಮಿನೇಷನ್ ಕುರಿತಾಗಿ ಕ್ಲಾಸ್ ತೆಗೆದುಕೊಂಡಿದ್ದರು. “ಅಸಂಬಂಧ ಕಾರಣ ನೀಡುವುದನ್ನು ನಿಲ್ಲಿಸಿ” ಎಂದು ತಾಕೀತು ಮಾಡಿದ್ದರೂ, ಈ ವಾರವೂ ಸ್ಪರ್ಧಿಗಳು ಅದೇ ತಪ್ಪು ಮಾಡಿದ್ದು, ಮನೆ ಮತ್ತೆ ಡ್ರಾಮಾದ ವೇದಿಕೆಯಾಗಿದೆ. ಚೈತ್ರಾ ಮತ್ತು ರಜತ್ ನಡುವಿನ ಈ ಕಿತ್ತಾಟಕ್ಕೆ ಬಿಗ್ ಬಾಸ್ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.