Back to Top

ಬಿಗ್ ಬಾಸ್ ಸೀಸನ್ 11 ಮೋಕ್ಷಿತಾ, ಮಂಜು ಆಯ್ತು.. ಈಗ ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ

SSTV Profile Logo SStv December 16, 2024
ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ
ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ
ಬಿಗ್ ಬಾಸ್ ಸೀಸನ್ 11 ಮೋಕ್ಷಿತಾ, ಮಂಜು ಆಯ್ತು.. ಈಗ ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ ಗೌತಮಿ ಮತ್ತು ರಜತ್ ನಡುವೆ ತೀವ್ರ ವಾಕ್ಸಮರ ನಡೆದು ಎಲ್ಲರ ಗಮನ ಸೆಳೆದಿದೆ. ಬಿಗ್ ಬಾಸ್ ನೀಡಿದ ಕ್ಲೀನಿಂಗ್ ಟಾಸ್ಕ್ ವೇಳೆ, ಮನೆಯಲ್ಲಿ ಕಸದ ರಾಶಿಯನ್ನು ಸರಿಪಡಿಸುವ ಕೆಲಸ ಆರಂಭವಾಗಿತ್ತು. ಸ್ಪರ್ಧಿಗಳು ಕೆಲಸದಲ್ಲಿ ತೊಡಗಿರುವಾಗ, ರಜತ್ ಸೋಫಾದ ಮೇಲೆ ಕೂತಿದ್ದನ್ನು ನೋಡಿದ ಗೌತಮಿ, "ಡೈಲಾಗ್ ಹೊಡಿ, ಕೂತ್ಕೊ.. ಹಣ್ಣು ತಿನ್ನು!" ಎಂದು ಟೀಕಿಸಿದರು. ಇದಕ್ಕೆ ಕೋಪಗೊಂಡ ರಜತ್, "ಇದು ನಿನ್ನ ಮನೆ ಅನ್ಸುತ್ತಿದಿಯಾ?" ಎಂದು ತಿರುಗೇಟು ನೀಡಿದರು. ಈ ಟೀಕೆ-ತಿರುಗೇಟು ಮುಂದೆ ವಾಕ್ಸಮರವಾಗಿ, ರಜತ್ "ಡ್ರಾಮಾ ಮಾಡ್ಕೊಂಡು 12 ವಾರ ಇದ್ದೀಯ" ಎಂದರೆ, ಗೌತಮಿ ಕೂಡ "ನೀವು ಡೈಲಾಗ್ ಹೊಡ್ತಾ ಇಲ್ಲವಾ?" ಎಂದು ಕೌಂಟರ್ ಕೊಟ್ಟರು. ಈ ಘಟನೆ ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇಂದು ರಾತ್ರಿ 9:30ಕ್ಕೆ ಪ್ರಸಾರವಾಗಲಿರುವ ಈ ಎಪಿಸೋಡ್‌ ನಿರೀಕ್ಷೆಯನ್ನು ಹೆಚ್ಚಿಸಿದೆ.