ಬಿಗ್ ಬಾಸ್ ಕನ್ನಡ ಸೀಸನ್ 11 ರಜತ್ ಮಂಜು ಗಲಾಟೆಯಿಂದ ಬಿಗ್ ಬಾಸ್ ಮನೆ ತಾರಕಕ್ಕೇರಿತು


ಬಿಗ್ ಬಾಸ್ ಕನ್ನಡ ಸೀಸನ್ 11 ರಜತ್ ಮಂಜು ಗಲಾಟೆಯಿಂದ ಬಿಗ್ ಬಾಸ್ ಮನೆ ತಾರಕಕ್ಕೇರಿತು ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ 12ನೇ ವಾರ ಮತ್ತೊಮ್ಮೆ ಗಲಾಟೆ ತಾರಕಕ್ಕೇರಿದ್ದು, ರಜತ್ ಮತ್ತು ಮಂಜು ನಡುವಿನ ಜಗಳ ರಣಾಂಗಣಕ್ಕೆ ತಿರುಗಿದೆ. 'ಚೆಂಡು ಸಾಗಲಿ ಮುಂದೆ ಹೋಗಲಿ' ಟಾಸ್ಕ್ ವೇಳೆ, ಫೌಲ್‌ಗಳ ಕುರಿತು ನಡೆದ ವಿವಾದ ಬಿಗ್‌ಬಾಸ್ ಚರ್ಚೆಗೆ ಕಾರಣವಾಯಿತು.
ಚೈತ್ರಾ ಧನರಾಜ್ ನಡುವೆ ಫೌಲ್ ವಿಚಾರದಲ್ಲಿ ಆರಂಭವಾದ ಗಲಾಟೆ, ರಜತ್ ಕೋಪದಿಂದ ಮತ್ತಷ್ಟು ತೀವ್ರಗೊಂಡಿತು. ಚೈತ್ರಾ ವಿರುದ್ಧ ತೀರ್ವ ಆಕ್ಷೇಪ ವ್ಯಕ್ತಪಡಿಸಿದ ರಜತ್, "ಆಟ ಗೆಲ್ಲೋ ಯೋಗ್ಯತೆ ಇಲ್ಲ" ಎಂದರು. ಚೈತ್ರಾ ತಿರುಗೇಟು ನೀಡುತ್ತ, "ಹೋಗಲೇ" ಎಂದು ಪ್ರತಿಸ್ಪಂದಿಸಿದರು.
ಈ ಮಧ್ಯೆ, ಮಂಜು ಮಧ್ಯಪ್ರವೇಶಿಸಿ ರಜತ್ ಜೊತೆ ವಾಗ್ವಾದ ನಡೆಸಿದ್ದು, ಗಲಾಟೆ ಇನ್ನಷ್ಟು ತಾರಕಕ್ಕೇರಿತು. "ಮುಟ್ಟಲೇ, ಮುಟ್ಟಲೇ" ಎಂದು ಇಬ್ಬರೂ ಆಕ್ರೋಶ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ತೀವ್ರ ಕಾರಣವಾಯಿತು.
ಗಲಾಟೆಯಿಂದಾಗಿ ಬಿಗ್ ಬಾಸ್ ಟಾಸ್ಕ್‌ಗಳು ಮುಂದೂಡಲ್ಪಡುವ ಸಾಧ್ಯತೆ ಇದ್ದು, ಈ ವಾರದ ಟಾಸ್ಕ್‌ಗಳು ರದ್ದಾಗಬಹುದು. ಮನೆಯಲ್ಲಿ ಬರುವ ವೀಕೆಂಡ್ ಎಪಿಸೋಡ್‌ನಲ್ಲಿ ಈ ವಿಚಾರಕ್ಕೆ ಸುದೀಪ್ ಸ್ಪಷ್ಟತೆ ನೀಡುವ ನಿರೀಕ್ಷೆಯಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
