Back to Top

ರಾಜ್ ಬಿ. ಶೆಟ್ಟಿ ಬಗ್ಗೆ ಪ್ರಶಾಂತ್ ನೀಲ್ ಭವಿಷ್ಯವಾಣಿ? ಈಗ ವೈರಲ್ ಆಗಿರುವ ಹಳೆಯ ವಿಡಿಯೋ!

SSTV Profile Logo SStv July 29, 2025
ರಾಜ್ ಬಿ. ಶೆಟ್ಟಿ ಬಗ್ಗೆ ಪ್ರಶಾಂತ್ ನೀಲ್ ಭವಿಷ್ಯವಾಣಿ
ರಾಜ್ ಬಿ. ಶೆಟ್ಟಿ ಬಗ್ಗೆ ಪ್ರಶಾಂತ್ ನೀಲ್ ಭವಿಷ್ಯವಾಣಿ

‘ಒಂದು ಮೊಟ್ಟೆಯ ಕಥೆ’ಯಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಜ್ ಬಿ. ಶೆಟ್ಟಿ, ಇದೀಗ ‘ಸು ಫ್ರಮ್ ಸೋ’ ಚಿತ್ರದ ಭರ್ಜರಿ ಯಶಸ್ಸಿನಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿತ್ರದಿಂದ ನಟನಾಗಿ ಹಾಗೂ ನಿರ್ಮಾಪಕನಾಗಿ ಗೆಲುವು ಕಂಡಿರುವ ರಾಜ್, ಬಾಕ್ಸ್ ಆಫೀಸ್‌ನಲ್ಲಿ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿದ್ದಾರೆ.

ಈ ನಡುವೆ, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ರಾಜ್ ಬಿ. ಶೆಟ್ಟಿಯ ಕಲೆಯನ್ನು ಮುಂಚೆಯೇ ಗುರುತಿಸಿ ಹೊಗಳಿದ್ದರು. “ಇಡೀ ದೇಶ ತಿರುಗಿ ನೋಡಬೇಕಾದ ನಿರ್ದೇಶಕ ರಾಜ್ ಬಿ. ಶೆಟ್ಟಿ” ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಪ್ರಶಾಂತ್, “ನಾನು ಪುಟ್ಟಣ್ಣ ಕಣಗಾಲ್ ಕಾಲದಲ್ಲಿ ಇರಲಿಲ್ಲ. ಹೀಗಾಗಿ ಅವರುಗಳ ಬಗ್ಗೆ ನಾನು ಮಾತನಾಡಲ್ಲ" ಎಂದೂ ಸ್ಪಷ್ಟಪಡಿಸಿದ್ದರು. ಈಗ ‘ಡ್ರ್ಯಾಗನ್’ ಚಿತ್ರದ ನಿರ್ದೇಶನದಲ್ಲಿ ತೊಡಗಿರುವ ಪ್ರಶಾಂತ್ ನೀಲ್, ‘ಸು ಫ್ರಮ್ ಸೋ’ ಕುರಿತು ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದು ನೋಡಬೇಕಿದೆ. ರಾಜ್ ಬಿ. ಶೆಟ್ಟಿ ಸಿನಿಮಾ ಕನ್ನಡದ ಗಡಿಗಳನ್ನು ದಾಟಿ ಎಲ್ಲ ವರ್ಗದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.