Back to Top

ವಿದೇಶದ ಬೀದಿಯಲ್ಲಿ ರಾಧಿಕಾ ಪಂಡಿತ್ ಐಸ್ ಕ್ರೀಮ್ ಸವಿದ ಕ್ಷಣಗಳು ವೈರಲ್!

SSTV Profile Logo SStv June 30, 2025
ರಾಧಿಕಾ ಪಂಡಿತ್ ಐಸ್ ಕ್ರೀಮ್ ಸವಿದ ಕ್ಷಣಗಳು ವೈರಲ್!
ರಾಧಿಕಾ ಪಂಡಿತ್ ಐಸ್ ಕ್ರೀಮ್ ಸವಿದ ಕ್ಷಣಗಳು ವೈರಲ್!

ರಾಕಿಂಗ್ ಸ್ಟಾರ್ ಯಶ್ ಪತ್ನಿ, ಪ್ರಸಿದ್ಧ ನಟಿ ರಾಧಿಕಾ ಪಂಡಿತ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೆಲವೊಂದು ಹತ್ತಿರದ ಮನಸ್ಸಿಗೆ ಹತ್ತಿರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಮಾತ್ರವಲ್ಲ, ಅವುಗಳ ಜೊತೆ ನೀಡಿದ ಆರ್ಥಪೂರ್ಣ ಸಂದೇಶವೂ ಇದೀಗ ವೈರಲ್ ಆಗುತ್ತಿದೆ.

ಅವರ ಕೈಯಲ್ಲಿ ಐಸ್ ಕ್ರೀಮ್ ಕೋನ್, ಮುಖದಲ್ಲಿ ಮಂದಹಾಸ, ಹೃದಯದಲ್ಲಿ ಮುಕ್ತತೆ ಇವೆಲ್ಲವೂ ಸೇರಿ ಆ ಕ್ಷಣವನ್ನೂ, ಆ ಮನಸ್ಥಿತಿಯನ್ನೂ ವಿಶೇಷವಾಗಿಸುತ್ತವೆ. ರಾಧಿಕಾ ಧರಿಸಿರುವ ಸ್ಲೀವ್‌ಲೆಸ್ ಕ್ರಿಮ್‌ ಕಲರ್ ಗೌನ್, ಓಪನ್ ಹೇರ್ ಸ್ಟೈಲ್, ಬ್ಲಾಕ್ ಶೇಡ್ಸ್ ಈ ಎಲ್ಲವೂ ಒಂದೊಂದು ಫ್ಯಾಷನ್ ಸ್ಟೇಟ್ಮೆಂಟ್ ಆಗಿವೆ.

ಈ ಫೋಟೋಗಳ ಬ್ಯಾಗ್ರೌಂಡ್ ನೋಡಿದರೆ ಸ್ಪಷ್ಟವಾಗುತ್ತದೆ ಈ ಸ್ಥಳ ಭಾರತದಲ್ಲಿಲ್ಲ. ಏಕೆಂದರೆ ಇಲ್ಲಿ ಎತ್ತರದ ಕಟ್ಟಡಗಳು, ಸ್ವಚ್ಛ ರಸ್ತೆಗಳು, ಫುಟ್ಪಾತ್‌ಗಳು ಎಲ್ಲವೂ ಶಾಂತ ವಾತಾವರಣವನ್ನು ತೋರಿಸುತ್ತವೆ. ಇಲ್ಲೆಲ್ಲಾ ಅಸಾಧಾರಣ ಶಾಂತಿ ಅಭಿಮಾನಿಗಳ ಚಪ್ಪಾಳೆ ಇಲ್ಲ, ಸೆಲ್ಫಿ ಕೋರಿಕೆಗಳ ಗದ್ದಲ ಇಲ್ಲ. ಇದೊಂದು ಬಿಡುವಿನ ಕ್ಷಣ ಹಕ್ಕಿಯಂತೆ ಮನಸಾರೆ ಓಡಾಡುವ ಕ್ಷಣ.

ಈ ಅದ್ಭುತ ಕ್ಷಣಗಳಿಗೆ ರಾಧಿಕಾ ಪಂಡಿತ್ ಬರೆದ ಸಾಲು ಹೆಚ್ಚು ಕಣ್ಣು ಹಿಡಿದಿದೆ, "Good thing that it’s always summer somewhere" ಅಂದರೆ, "ಬೇಸಿಗೆ ಎಲ್ಲಾದರೂ ಒಂದಲ್ಲೊಂದು ಕಡೆ ಇರುತ್ತದೆ" ಎಂಬ ಸರಳ ಸಾಲು, ಜೀವನದ ಸೌಂದರ್ಯವನ್ನೇ ಹೆಮ್ಮೆಪಡುವ ರೀತಿಯಲ್ಲಿ ಹೇಳುತ್ತದೆ. ಈ ಸಾಲು ಮಾತ್ರವಲ್ಲ, ಈ ಮೂರು ಫೋಟೋಗಳಲ್ಲೂ ರಾಧಿಕಾ ಪಂಡಿತ್ ಕೈಯಲ್ಲಿ ಒಂದೇ ಐಸ್ ಕ್ರೀಮ್ ಕೋನ್ ಇದೆ ಅದು ಮಲ್ಟಿ ಫ್ಲೇವರ್ ಆದ್ದರಿಂದ ಬಣ್ಣದಲ್ಲೂ, ಭಾವದಲ್ಲೂ ಆಕರ್ಷಕವಾಗಿದೆ. ಈ ಚಿತ್ರಗಳಲ್ಲಿ ಅವರ ಭಾವಗಳು, ಶೈಲಿ ಮತ್ತು ಅಭಿವ್ಯಕ್ತಿ ಎಲ್ಲವೂ ತುಂಬಾ ನೈಸರ್ಗಿಕ. ಇದೇ ತಾನೇ "ಸೌಂದರ್ಯ ಅಂದರೆ ಸರಳತೆ" ಎನ್ನುವ ಹಳೆಯ ಮಾತಿಗೆ ಹೊಸ ಅರ್ಥ ನೀಡಿದ ಕ್ಷಣ!