Back to Top

ಬಿಗ್ ಬಾಸ್ 12ರಲ್ಲಿ ‘ರಾಧಾ ಮಿಸ್’? ಶ್ವೇತಾ ಪ್ರಸಾದ್ ಹೇಳಿಕೆಗೆ ನೆಟ್ಟಿಗರಿಂದ ಬೆಂಬಲ

SSTV Profile Logo SStv July 24, 2025
ರಾಧಾ ಮಿಸ್ ಬಿಗ್ ಬಾಸ್ ಮನೆಗೆ ಎಂಟ್ರಿ
ರಾಧಾ ಮಿಸ್ ಬಿಗ್ ಬಾಸ್ ಮನೆಗೆ ಎಂಟ್ರಿ

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭಕ್ಕೆ ಇನ್ನೂ ಕೆಲವೇ ತಿಂಗಳು ಬಾಕಿಯಿದ್ದು, ಪ್ರೋಮೋ ಕೂಡ ಬಿಡುಗಡೆ ಆಗಿಲ್ಲ. ಈ ನಡುವೆ ಸ್ಪರ್ಧಿಗಳ ಬಗ್ಗೆ ಊಹಾಪೋಹಗಳು ಶುರುವಾಗಿದೆ.

ಈ ಬಾರಿ ಜನಪ್ರಿಯ ಧಾರಾವಾಹಿ ರಾಧಾ ರಮಣದ ‘ರಾಧಾ ಮಿಸ್’ ನಟಿ ಶ್ವೇತಾ ಪ್ರಸಾದ್ ಬಿಗ್ ಬಾಸ್ ಮನೆಗೆ ಕಾಲಿಡುವ ಸಾಧ್ಯತೆ ಇದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಬಗ್ಗೆ ಮಾತನಾಡಿದ ಶ್ವೇತಾ, “ಹಲವಾರು ಸೀಸನ್‌ಗಳಿಗೆ ಕರೆ ಬಂದಿದೆ. ಈ ಬಾರಿಯೂ ಬಂದಿದೆ. ಈ ಬಾರಿ ಹೋದ್ರು ಹೋಗಬಹುದು,” ಎಂದು ಹೇಳಿದ್ದಾರೆ.

ಸದ್ಯ ಶ್ವೇತಾ ಪ್ರಸಾದ್ ಬಿಗ್ ಬಾಸ್ ಮನೆಯ ಭಾಗವಾಗಬಹುದೆಂಬ ಅನುಮಾನಕ್ಕೆ ಅವರ ಮಾತುಗಳು ಮತ್ತಷ್ಟು ಬಲ ನೀಡಿದ್ದು, ಅಭಿಮಾನಿಗಳಲ್ಲಿ ಹಂಗಾಂಕ್ಷೆ ಹೆಚ್ಚಾಗಿದೆ. ಇನ್ನೆಂದಾದರೂ ಅಧಿಕೃತ ಘೋಷಣೆ ಹೊರಬಿದ್ದರೆ, ಶ್ವೇತಾ ಎಂಟ್ರಿಗೆ ಫ್ಯಾನ್ಸ್ ಸಂಭ್ರಮಿಸಲೇಬೇಕಾಗಿದೆ!