Back to Top

'ಡೆವಿಲ್' ಚಿತ್ರ ಶೂಟಿಂಗ್ ನಡುವೆಯೇ ರಚನಾ ರೈ ಫುಲ್ ಜಾಲಿ ಮೋಡ್ – ಥೈಲ್ಯಾಂಡ್‌ ಬೀದಿಯಲ್ಲಿ ರಚನಾ ರೈ ಸ್ಟೈಲಿಶ್ ಫೋಟೋಶೂಟ್

SSTV Profile Logo SStv July 21, 2025
ರಚನಾ ರೈ ಪೋಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್!
ರಚನಾ ರೈ ಪೋಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್!

‘ಡೆವಿಲ್’ ಚಿತ್ರದ ನಾಯಕಿ ರಚನಾ ರೈ, ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ ಶೂಟಿಂಗ್ ನಡುವೆಯೇ ತನ್ನ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಡ್ಯುಯೆಟ್ ಹಾಡಿನ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ಗೆ ತೆರಳಿದ ರಚನಾ, ಶೂಟಿಂಗ್ ಬಿಡುವಿನಲ್ಲಿ ಬಿಳಿ ಟೀಶರ್ಟ್‌, ನೀಲಿ ಜೀನ್ಸ್ ಮತ್ತು ಬಿಳಿ ಶೂ ಧರಿಸಿ ಹಲವು ಸ್ಟೈಲಿಶ್ ಪೋಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋಗಳು ಕ್ಯಾಂಡಿಡ್ ಶೈಲಿಯಲ್ಲಿ ತೆಗೆಯಲ್ಪಟ್ಟಿದ್ದು, ಫ್ಯಾನ್ಸ್‌ ಮನಸ್ಸು ಸೆಳೆಯುತ್ತಿವೆ. ನಟನೆಯ ಜೊತೆಗೇ ರಚನಾ ರೈ ತುಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದು, ‘ಡೆವಿಲ್’ ಅವರ ಮೊದಲ ದೊಡ್ಡ ಕನ್ನಡ ಸಿನಿಮಾ. ಅಷ್ಟೇ ಅಲ್ಲದೆ ಅವರು ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ, ಭರತನಾಟ್ಯ ಕಲಾವಿದೆ ಎಂಬುದೂ ವಿಶೇಷ.

ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ನಟಿಸುತ್ತಿರುವ ರಚನಾ ರೈ, ಈ ಪಾತ್ರದ ಮೂಲಕ ಮತ್ತಷ್ಟು ಹೆಸರು ಗಳಿಸುವ ನಿರೀಕ್ಷೆಯಿದೆ. ‘ಡೆವಿಲ್’ ಸಿನಿಮಾದ ಜೊತೆ, ರಚನಾ ರೈ ಅವರ ಫೋಟೋಗಳೂ ಈಗ ವೈರಲ್ ಆಗುತ್ತಿವೆ.