Back to Top

ಪುತ್ರ ವಿನೀಶ್ ಜೊತೆಗೆ ವಿದೇಶಕ್ಕೆ ದರ್ಶನ್; ಏರ್‌ಪೋರ್ಟ್ ಫೋಟೋ ವೈರಲ್

SSTV Profile Logo SStv July 16, 2025
ಪುತ್ರ ವಿನೀಶ್ ಜೊತೆಗೆ ವಿದೇಶಕ್ಕೆ ದರ್ಶನ್
ಪುತ್ರ ವಿನೀಶ್ ಜೊತೆಗೆ ವಿದೇಶಕ್ಕೆ ದರ್ಶನ್

ನಟ ದರ್ಶನ್, ತಮ್ಮ ಪುತ್ರ ವಿನೀಶ್ ಮತ್ತು ‘ಡೆವಿಲ್’ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಹಾಗೂ ಚಿತ್ರತಂಡದೊಂದಿಗೆ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಮಂಗಳವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ ಅವರು ಈಗಾಗಲೇ ಬ್ಯಾಂಕಾಕ್ ತಲುಪಿದ್ದಾರೆ.

ಕೊಲೆ ಆರೋಪದ ಬಳಿಕದ ದರ್ಶನ್ ಅವರ ಮೊದಲ ವಿದೇಶ ಪ್ರವಾಸವಾಗಿದ್ದು, ಕೋರ್ಟ್ ಅನುಮತಿಯೊಂದಿಗೆ ಅವರು ಪ್ರಯಾಣದಲ್ಲಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ತೈಲ್ಯಾಂಡ್ ತೆರಳಿರುವ ದರ್ಶನ್, ಹತ್ತು ದಿನಗಳವರೆಗೆ ಅಲ್ಲಿರುವ ಸಾಧ್ಯತೆ ಇದೆ.

ಗುರುವಾರದಿಂದ ಐದು ದಿನಗಳ ಕಾಲ ನಡೆಯಲಿರುವ ಹಾಡಿನ ಚಿತ್ರೀಕರಣದೊಂದಿಗೆ ‘ಡೆವಿಲ್’ ಚಿತ್ರದ ಶೂಟಿಂಗ್ ಸಂಪೂರ್ಣ ಮುಕ್ತಾಯವಾಗಲಿದೆ. ಈ ಮೊದಲು ಯುರೋಪ್ ಹಾಗೂ ದುಬೈ ಪ್ರವಾಸಕ್ಕೆ ಪ್ರಯತ್ನಿಸಿದ ದರ್ಶನ್, ವೀಸಾ ಸಮಸ್ಯೆಯಿಂದ ತೈಲ್ಯಾಂಡ್‌ನ್ನು ಆಯ್ಕೆ ಮಾಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ದರ್ಶನ್, ವಿನೀಶ್ ಮತ್ತು ನಿರ್ದೇಶಕ ಪ್ರಕಾಶ್ ಜೊತೆಯ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.