Back to Top

ಪವರ್‌ಫುಲ್ ದೇವಿಯ ದರ್ಶನ ಪಡೆದ ಭೂಮಿ ಶೆಟ್ಟಿ – ಕಾಮಾಕ್ಯ ಕ್ಷೇತ್ರದಲ್ಲಿ ಭಾವಪೂರ್ಣ ಅನುಭವ ಹಂಚಿಕೊಂಡ ನಟಿ

SSTV Profile Logo SStv July 7, 2025
ಪವರ್‌ಫುಲ್ ದೇವಿಯ ದರ್ಶನ ಪಡೆದ ಭೂಮಿ ಶೆಟ್ಟಿ
ಪವರ್‌ಫುಲ್ ದೇವಿಯ ದರ್ಶನ ಪಡೆದ ಭೂಮಿ ಶೆಟ್ಟಿ

ಡೇರಿಂಗ್‌ ಮತ್ತು ಡ್ಯಾಶಿಂಗ್‌ ನಟಿಯಾಗಿ ಹೆಸರುವಾಸಿಯಾದ ಭೂಮಿ ಶೆಟ್ಟಿ, ಇತ್ತೀಚೆಗೆ ಪವರ್‌ಫುಲ್ ಶಕ್ತಿಪೀಠವಾದ ಅಸ್ಸಾಂನ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ನಲ್ಲಿ ಗಮನ ಸೆಳೆದ ಈ ನಟಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೇವಾಲಯದ ಮುಂದೆ ನಿಂತಿರುವ ಭಕ್ತಿ ಭಾವನೆಯಿಂದ ಕೂಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಸೀರೆ, ಹಣೆಗೆ ಕುಂಕುಮ, ಕೈಯಲ್ಲಿ ಹೂವಿನ ತೂಟು ಹಿಡಿದ ಭೂಮಿ ಶೆಟ್ಟಿ, “ನಾನು ಯಾಕೆ ಹೆಣ್ಣಾಗಿ ಹುಟ್ಟಿದೆ ಎಂದು ಪ್ರಶ್ನಿಸಿದ್ದೆ. ಆದರೆ ನನ್ನ ಒಳಗಿನ ಶಕ್ತಿಯ ಅರಿವಾಗಿ ದೇವಿಯ ಮಾರ್ಗದಲ್ಲಿ ಸಾಗುತ್ತಿದ್ದೇನೆ” ಎಂಬ ಭಾವನಾತ್ಮಕ ಶೈಲಿಯಲ್ಲಿ ತಮ್ಮ ಅನುಭವವನ್ನು ಬರೆದಿದ್ದಾರೆ.

ಭಾರತದ 51 ಶಕ್ತಿಪೀಠಗಳಲ್ಲಿ ಪ್ರಮುಖವಾದ ಕಾಮಾಕ್ಯ ಕ್ಷೇತ್ರ, ಗುವಾಹಟಿಯ ನಿಲಚಲ್ ಬೆಟ್ಟದ ಮೇಲೆ ಸ್ಥಿತವಾಗಿದೆ. ಇಲ್ಲಿ ದೇವಿ ವಿಗ್ರಹವಿಲ್ಲ, ಬದಲಾಗಿ ಯೋನಿಯ ಪೂಜೆ ನಡೆಯುತ್ತದೆ ಎಂಬುದು ವಿಶೇಷ. ಭಕ್ತಿಯಿಂದ ತುಂಬಿ ನಿಂತ ಈ ದರ್ಶನದಿಂದ ಭೂಮಿ ಶೆಟ್ಟಿ ಆಂತರಿಕ ಶಕ್ತಿಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಪ್ರಸಕ್ತ ಭಕ್ತಿಯಿಂದ ತಮ್ಮ ಜೀವನ ಪಯಣವನ್ನು ಹೊಸ ದೃಷ್ಟಿಕೋಣದಿಂದ ನೋಡುತ್ತಿರುವ ಭೂಮಿ ಶೆಟ್ಟಿ, ಅವರ ಈ ಆತ್ಮೀಯ ದರ್ಶನದ ಅನುಭವದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.