Back to Top

ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ: ಮೂವರು ಬಂಧನ; ಪೊಲೀಸರ ಕಾರ್ಯಕ್ಕೆ ನಟಿಯಿಂದ ಮೆಚ್ಚುಗೆ

SSTV Profile Logo SStv August 2, 2025
ಪೊಲೀಸರ ಕಾರ್ಯಕ್ಕೆ ರಮ್ಯಾಯಿಂದ ಮೆಚ್ಚುಗೆ
ಪೊಲೀಸರ ಕಾರ್ಯಕ್ಕೆ ರಮ್ಯಾಯಿಂದ ಮೆಚ್ಚುಗೆ

ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕುಟುಂಬದ ಪರ ಮಾತನಾಡಿದ್ದಕ್ಕಾಗಿ, ದರ್ಶನ್ ಅಭಿಮಾನಿಗಳಿಂದ ರಮ್ಯಾಗೆ ತೀವ್ರ ವಾಗ್ದಾಳಿ ಎದುರಾಗಿ, ಇನ್‌ಸ್ಟಾಗ್ರಾಂನಲ್ಲಿ 43 ಖಾತೆಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮೂವರನ್ನು ಅಧಿಕೃತವಾಗಿ ಬಂಧಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ರಮ್ಯಾ ಅವರು ಪೋಸ್ಟ್ ಮಾಡಿ, ಮಹಿಳೆಯರ ಗೌರವ ಕಾಪಾಡಿದ ಬೃಹತ್ ಕಾರ್ಯಕ್ಕೆ ಬೆಂಗಳೂರು ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.