ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ – ಜಾಮೀನು ವಿಚಾರಣೆ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ವೀಡಿಯೋ


ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಜೈಲಿನಿಂದ ಬಿಡುಗಡೆಯಾದ ನಂತರ ಇದೀಗ ಬ್ಯುಸಿನೆಸ್ ಹಾಗೂ ಫೋಟೋಶೂಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಟೆಂಪಲ್ ರನ್' ಬಳಿಕ ಅವರು ರೆಡ್ ಕಾರ್ಪೆಟ್ ಎಂಬ ಕಂಪನಿಯಲ್ಲಿ ಸಕ್ರಿಯರಾಗಿದ್ದು, ಹಲವು ರಾಜ್ಯಗಳಲ್ಲಿ ತಮ್ಮ ಪ್ರಾಜೆಕ್ಟ್‌ಗಾಗಿ ಪ್ರಯಾಣಿಸಿದರು.
ಇದೀಗ ಅವರು ಫೋಟೋಶೂಟ್ ಮಾಡಿಸಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪವಿತ್ರಾ ಗೌಡ ರೂಪದರ್ಶಿಗೆ ಪಾಠ ಮಾಡುತ್ತಿರುವಂತಿದೆ. ಈ ದೃಶ್ಯಗಳು ವೈರಲ್ ಆಗುತ್ತಿರುವ ವೇಳೆ, ಜುಲೈ 22ರಂದು ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದು ಕುರಿತ ವಿಚಾರಣೆ ನಡೆಯಲಿದೆ.
ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, "ಜಾಮೀನು ರದ್ದು ಮಾಡಬಾರದೇ?" ಎಂಬ ಪ್ರಶ್ನೆಯನ್ನು ಎತ್ತಿದ್ದು, ಪವಿತ್ರಾಗೆ ಮತ್ತೆ ಜೈಲು ಗತಿಯ ಸಾಧ್ಯತೆಯೂ ಇದೆ. ಈ ಮಧ್ಯೆಯೇ ನಗುತ್ತಾ ಪೋಸ್ ಕೊಟ್ಟಿರುವ ಪವಿತ್ರಾ ಗೌಡ ಫೋಟೋಶೂಟ್ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಇದು ಕೇವಲ ವ್ಯವಹಾರ ಮುನ್ನಡೆಸುವ ಕಡೆಯೋ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಇಮೇಜ್ ಕಟ್ಟಿಕೊಳ್ಳುವ ಪ್ರಯತ್ನವೋ ಎಂಬುದು ಪ್ರೇಕ್ಷಕರ ವೀಕ್ಷಣೆಗಿರುವ ಪ್ರಶ್ನೆಯಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
