Back to Top

ಮುದ್ದು ರಾಕ್ಷಸಿ ವಿಜಯಲಕ್ಷ್ಮಿಯ ಇನ್‌ಸ್ಟಾ ಸ್ಟೋರಿ ಸಖತ್ ವೈರಲ್!

SSTV Profile Logo SStv June 30, 2025
ಪತ್ನಿಗೆ ಪ್ಯಾರೊಟ್ ಗಿಫ್ಟ್ ಮಾಡಿದ ದರ್ಶನ್
ಪತ್ನಿಗೆ ಪ್ಯಾರೊಟ್ ಗಿಫ್ಟ್ ಮಾಡಿದ ದರ್ಶನ್

ಸ್ಯಾಂಡಲ್ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಸಿನಿಮಾ ಹಾಗೂ ಕುಟುಂಬದ ನಡುವೆ ಸಮತೋಲನ ಸಾಧಿಸುತ್ತಿರುವ ದೃಶ್ಯಗಳು ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿಯನ್ನು ಹುಟ್ಟುಹಾಕಿವೆ. ಹಿಂದೆ ವಾರಾಂತ್ಯದಲ್ಲಿ ಸ್ನೇಹಿತರೆಲ್ಲರೊಂದಿಗೆ ಸಮಯ ಕಳೆಯುತ್ತಿದ್ದ ದರ್ಶನ್ ಈಗ ಮನೆಯವರೊಂದಿಗೆ, ವಿಶೇಷವಾಗಿ ಪತ್ನಿ ವಿಜಯಲಕ್ಷ್ಮಿಯವರ ಜೊತೆ ಬಹುಮಾನ್ಯ ಸಮಯವನ್ನು ಕಳೆಯುತ್ತಿದ್ದಾರೆ.

ಇತ್ತೀಚೆಗೆ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಹಂಚಿಕೊಂಡಿರುವ ಒಂದು ಪ್ಯಾರೋಟ್ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ದರ್ಶನ್‌ ಅವರ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ದಾಖಲಿಸಿಕೊಂಡಿದ್ದು, ಅಲ್ಲಿ ಪಿಂಕ್ ಪ್ಯಾರೊಟ್‌ಗಳೊಂದಿಗೆ ವಿಜಯಲಕ್ಷ್ಮಿಯವರು ಕಳೆಯುತ್ತಿರುವ ಸಂತೋಷದ ಕ್ಷಣಗಳನ್ನು ಹೊಂದಿದೆ.

ಪಿಂಕ್ ಗಿಳಿಯೊಂದಿಗೆ ಆಡುತ್ತಿರುವ ವಿಜಯಲಕ್ಷ್ಮಿಯ ಮುದ್ದಾದ ನಗು, ಪ್ರೀತಿ ತುಂಬಿದ ಸ್ಪರ್ಶ ಎಲ್ಲವೂ ಅಭಿಮಾನಿಗಳ ಮನಸ್ಸಿಗೆ ತಟ್ಟಿದೆ. ದರ್ಶನ್ ಅವರು ತಮ್ಮ ಪತ್ನಿಯನ್ನು ‘ಮುದ್ದು ರಾಕ್ಷಸಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ ಎಂಬ ಸಂಗತಿ ಈಗ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಈ ವಿಡಿಯೋದಲ್ಲಿ ಮುದ್ದು ಪ್ಯಾರೊಟ್ ಜೊತೆ ಮುದ್ದು ರಾಕ್ಷಸಿಯ ಮುದ್ದಾದ ಮಾತುಕತೆ ಎಲ್ಲರಿಗೂ ಖುಷಿಯನ್ನು ತಂದಿದೆ.

ಈ ಮುದ್ದಾದ ಫ್ಯಾಮಿಲಿ ಮೋಮೆಂಟ್ ಗೆ ದರ್ಶನ್ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕಾಮೆಂಟ್‌ನಲ್ಲಿ “ಮೇಲ್ನೋಟಕ್ಕೆ ಸರಳವಾದ ಈ ದೃಶ್ಯಗಳು ದಾಸನ ಅಂತರಂಗದ ಪ್ರೀತಿಯ ಮನೋಭಾವನೆಗಳನ್ನು ತೋರಿಸುತ್ತವೆ” ಎಂದಿದ್ದಾರೆ.