ನಿವೇದಿತಾ ಗೌಡ – ಫ್ಯಾಷನ್ ಪ್ರಿಯೆಯ ನಿಜ ಮುಖ ಬಹಿರಂಗಪಡಿಸಿದ ಸುಶ್ಮಿತಾ ಜಗಪ್ಪ!


ಕಿರುತೆರೆಯ ‘ಬಿಗ್ ಬಾಸ್ ಕನ್ನಡ ಸೀಸನ್ 5’ ಮೂಲಕ ಮನೆಮಾತಾದ ನಿವೇದಿತಾ ಗೌಡ, ಫ್ಯಾಷನ್ ಪ್ರಿಯೆ ಎನ್ನುತ್ತಾರೆ ನಟಿ ಸುಶ್ಮಿತಾ ಜಗಪ್ಪ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, “ನಿವೇದಿತಾ ಅವರ ಲೈಫ್ ಟೈಮ್‌ನಲ್ಲಿ ಒಂದೂ ಡ್ರೆಸ್ ರಿಪೀಟ್ ಮಾಡಿದ ಉದಾಹರಣೆ ಇಲ್ಲ. ಅವಳ ಬಟ್ಟೆಗಳನ್ನೆಲ್ಲಾ ನಿವೇದಿತಾ ತಾನೇ ಡಿಸೈನ್ ಮಾಡ್ತಾಳೆ. ಪರ್ಸನಲ್ ಡಿಸೈನರ್ ಇಲ್ಲ,” ಎಂದು ತಿಳಿಸಿದ್ದಾರೆ.
ರಿಹರ್ಸಲ್‌ಗೆ ಸದಾ ಫುಲ್ ರೆಡಿಯಾಗಿ ಬರುವ ನಿವೇದಿತಾ, ಪ್ರತಿದಿನವೂ ಚೆಂದವಾಗಿ ಡ್ರೆಸ್ ಮಾಡಿಕೊಳ್ಳುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. “ನಾನು ಯಾವಾಗಲೂ ಆಕ್ಟೀವ್ ಇರುತ್ತೀನಿ, ಅದಕ್ಕಾಗಿ ಪ್ರತಿದಿನವೂ ಚೆನ್ನಾಗಿ ತಯಾರಾಗೋದು ಇಷ್ಟ” ಎಂದಿದ್ದಾರಂತೆ ನಿವೇದಿತಾ.
ಹಲವು ರಿಯಾಲಿಟಿ ಶೋಗಳ ಜೊತೆಗೆ ‘ಕ್ವಾಟ್ಲೆ ಕಿಚನ್’ ಶೋದಲ್ಲೂ ಬ್ಯುಸಿಯಾಗಿರುವ ನಿವೇದಿತಾ, ಸೌಂದರ್ಯ ಮತ್ತು ಸರಳತೆಗೆ ಮೆಚ್ಚುಗೆ ಗಳಿಸುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
