Back to Top

ಭೀಮನ ಅಮಾವಾಸ್ಯೆ ಸ್ಪೆಷಲ್‌: ಪತಿಯ ಪಾದ ತೊಳೆದ ಜ್ಯೋತಿ ಪ್ರೇಮ್ – ನೆನಪಿರಲಿ ಪ್ರೇಮ್ ಶೇರ್ ಮಾಡಿದ ಪ್ರೀತಿಯ ಕ್ಷಣ

SSTV Profile Logo SStv July 24, 2025
ನೆನಪಿರಲಿ ಪ್ರೇಮ್ ಶೇರ್ ಮಾಡಿದ ಪ್ರೀತಿಯ ಕ್ಷಣ
ನೆನಪಿರಲಿ ಪ್ರೇಮ್ ಶೇರ್ ಮಾಡಿದ ಪ್ರೀತಿಯ ಕ್ಷಣ

ನೆನಪಿರಲಿ ಪ್ರೇಮ್ ಮತ್ತು ಜ್ಯೋತಿ ಪ್ರೇಮ್ ದಂಪತಿಯ ಪ್ರೀತಿಯ ಸಂಬಂಧಕ್ಕೆ ಮತ್ತೊಂದು ಸುವರ್ಣ ಪುಟ ಸೇರಿದೆ. ಭೀಮನ ಅಮಾವಾಸ್ಯೆ ಪ್ರಯುಕ್ತ ಜ್ಯೋತಿ ತಮ್ಮ ಪತಿ ಪ್ರೇಮ್‌ ಅವರಿಗೆ ಪಾದ ಪೂಜೆ ಮಾಡಿದ್ದು, ಆ ಪವಿತ್ರ ಕ್ಷಣವನ್ನು ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಜ್ಯೋತಿ ತಟ್ಟೆ ತೆಗೆದುಕೊಂಡು ಪಾದ ತೊಳೆಯುವ ದೃಶ್ಯವಿದೆ. ಪ್ರೇಮ್ ಕೂಡ ಈ ಸಂದರ್ಭ ತಮ್ಮ ಪತ್ನಿಯ ಬಗ್ಗೆ “ನಮ್ಮ ಮನೆಯ ಮಹಾಲಕ್ಷ್ಮಿಯಿಂದ ಪೂಜೆ” ಎಂದು ಬರೆದಿದ್ದಾರೆ.

ಪ್ರೀತಿಯಿಂದ ಮದುವೆಯಾಗಿರುವ ಈ ಜೋಡಿ, ದಶಕಗಳಿಂದ ಪರಸ್ಪರ ಆತ್ಮೀಯತೆಯಿಂದ ಬದುಕು ಸಾಗಿಸುತ್ತಿದ್ದಾರೆ. ಇಂದು ಈ ಜೋಡಿಯ ಪ್ರೀತಿಯ ನಿಜವಾದ ರೂಪ ಭೀಮನ ಅಮಾವಾಸ್ಯೆ ದಿನ ಮತ್ತೊಮ್ಮೆ ಹೊರಹೊಮ್ಮಿದ್ದು, ಅಭಿಮಾನಿಗಳ ಮನಸೂ ಕದಿದಿದೆ.