ನವರಸ ನಾಯಕ ಜಗ್ಗೇಶ್ ಕೊಟ್ಟಿಯೂರು ದೇವಾಲಯಕ್ಕೆ ಭೇಟಿ: ಆಧ್ಯಾತ್ಮಿಕ ಕ್ಷಣಗಳ ಶೇರ್!


ಕನ್ನಡದ ಹಿರಿಯ ನಟ ಜಗ್ಗೇಶ್ ಅವರು ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಇತ್ತೀಚೆಗಷ್ಟೆ ಭೇಟಿ ನೀಡಿದ್ದು, ತಮ್ಮ ಆಧ್ಯಾತ್ಮಿಕ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೇವಸ್ಥಾನವು ವರ್ಷಕ್ಕೆ ಕೇವಲ 30 ದಿನಗಳವರೆಗೆ ಮಾತ್ರ ಭಕ್ತರಿಗೆ ತೆರೆದಿರುತ್ತದೆ. ಇದೇ ಸಂದರ್ಭ ದರ್ಶನ್ ಕೂಡ ದರ್ಶನ ಪಡೆದು ಬಂದಿದ್ದರು.
ಜಗ್ಗೇಶ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ಭೇಟಿ ನೀಡಿದ ಆಧ್ಯಾತ್ಮಿಕ ಕ್ಷಣ, ದಕ್ಷಬ್ರಹ್ಮನ ಶಿರಛೇದ ಮಾಡಿದ ಶಿವನ ಅಂಶ ವೀರಭದ್ರನ ಐತಿಹಾಸಿಕ ಕ್ಷೇತ್ರ ಎಂಬ ದೃಡನಂಬಿಕೆಯ… ವರ್ಷಕ್ಕೆ 28ದಿನಗಳು ಮಾತ್ರ ಪೂಜಾ ಕಾರ್ಯ ನಡೆಯುತ್ತದೆ ಈ ಕ್ಷೇತ್ರದಲ್ಲಿ..ಹಿಂದೆ ಕಾಡಿನ ಸುತ್ತಮುತ್ತ ವಾಸಮಾಡುತ್ತಿದ್ದ ಜನರ ಆರಾಧನ ಕ್ಷೇತ್ರವಾಗಿತ್ತು...ಇಂದು ಶಬರಿಮಲೆ ಅಯ್ಯಪ್ಪನ ಆಲಯದಂತೆ ಪ್ರಸಿದ್ಧಿ ಪಡೆದಿದೆ. ನನ್ನ ಆತ್ಮೀಯ ಮಿತ್ರ ಕೇರಳ ರಾಜ್ಯದ (DIG) ಪೋಲಿಸ್ ಆಧಿಕಾರಿ ಶ್ರೀ ಯತೀಶ್ ಚಂದ್ರ ರವರು ನನ್ನ ಬರಮಾಡಿಕೊಂಡು ದರ್ಶನಕ್ಕೆ ಸಹಕಾರಿಯಾದರು...ಧನ್ಯವಾದ ಸಾರ್, ಸರ್ವೇಜನಾಃಸುಖಿನೋಭವಂತು ಎಂದು ತಿಳಿಸಿದ್ದಾರೆ.
ಇಂತಹ ವೈಶಿಷ್ಟ್ಯಪೂರ್ಣ ಸ್ಥಳಕ್ಕೆ ನಟರು ಭೇಟಿ ನೀಡುತ್ತಿರುವುದು, ಹಲವು ಭಕ್ತರಲ್ಲಿ ಕುತೂಹಲ ಹೆಚ್ಚಿಸುತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
