ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ದೂರು ದಾಖಲು ಅಪರಿಚಿತ ವ್ಯಕ್ತಿ ದೀಪಿಕಾ ದಾಸ್ ತಾಯಿಗೆ ಮಧ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯಲ್ಲಿ ದೀಪಿಕಾ ದಾಸ್ ಮನೆ ಇದೆ. ದೀಪಿಕಾದಾಸ್ ತಾಯಿ ಪದ್ಮಲತಾಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆದರಿಕೆ ಹಾಕಿದ ಕಿಡಿಗೇಡಿಗಾಗಿ ಮಾದನಾಯಕನಹಳ್ಳಿ ಪೊಲೀಸರ ಹುಡುಕಾಟ ನಡೆಸಿದಿದ್ದಾರೆ.ದೀಪಿಕಾ ದಾಸ್ ತಾಯಿ ಪದ್ಮಲತಾ ದಾಖಲಿಸಿದ ಎಫ್ಐಆರ್‌ನಲ್ಲಿ ಹೀಗಿದೆ. ನನ್ನ ಮಗಳು ಚಲನಚಿತ್ರ ನಟಿಯಾಗಿದ್ದು,8 ತಿಂಗಳ ಹಿಂದೆ ದೀಪಕ್ ಕುಮಾರ್ ಎನ್ನುವವರ ಜೊತೆ ವಿವಾಹವಾಗಿರುತ್ತೆ. ಮಗಳು ಮತ್ತು ಅಳಿಯ 1 ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿರ್ತಾರೆ. ಹೀಗೆ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಯಾಕೆ ಮದುವೆ ಮಾಡಿದ್ರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡಿರುತ್ತಾನೆ ಎಂದಿದ್ದ.ನಾನು ಹಾಗೇನಾದ್ರುಇದ್ರೆ, ಕಾನೂನಾತ್ಮಕವಾಗಿ ದೂರು ನೀಡುವಂತೆ ಹೇಳಿದ್ದೆ. ಕೆಲವು ದಿನಗಳ ನಂತರ ನನ್ನ ಮಗಳು ದೀಪಿಕಾ ದಾಸ್ ಗೆ ಕರೆ ಮಾಡಿದ್ದ. ನಿಮ್ಮ ಯಾಜಮಾನರು ಅಕ್ರಮ ಚಟುವಟಿಕೆಗಳಿಂದ ಮೋಸ ಮಾಡಿದ್ದು ನಿಮಗೆ ತಿಳಿದಿಲ್ಲವೆ. ನೀವು ಪುನೀತ್ ರಾಜ್ ಕಾಮಾರ್ ಸಮಾಧಿ ಬಳಿ ಆಣೆ ಮಾಡುವಂತೆ ಕೇಳಿದ್ದ.ಅದಕ್ಕೆ ಈ ಆರೋಪಗಳೆಲ್ಲ ಸುಳ್ಳು ಇದಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ತರಬೇಡಿ ಎಂದಿದ್ದಳು. ನೀವೂ ಕಾನೂನು ರೀತಿ ದೂರು ನೀಡಿ ಎಂದು ಹೇಳಿರುತ್ತಾಳೆ. ನನಗೆ ಹಣ ನೀಡಿ ಎಂದಿದ್ದ. ಹಣ ನೀಡದೆ ಇದ್ದರೆ ನಿಮ್ಮ ಹೆಸರು ಬರೆದು ಅತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಸಿದ್ದ.ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿರುತ್ತಾನೆ. ಯಶವಂತ ಎಂಬಾತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಬಿಎನ್ಎಸ್ 308 ಅಡಿಯಲ್ಲಿ ಎಫ್ಐಆರ್ ದಾಖಲು ಆಗಿದೆ. ಮಾದನಾಯಕಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.