Back to Top

ನಟಿ ದೀಪಿಕಾ ದಾಸ್‌ ಕಾಮಾಕ್ಯ ಶಕ್ತಿಪೀಠಕ್ಕೆ ಮೊದಲ ಭೇಟಿ – ಭಕ್ತಿಯಿಂದ ತುಂಬಿದ ಅನುಭವ!

SSTV Profile Logo SStv July 4, 2025
ನಟಿ ದೀಪಿಕಾ ದಾಸ್‌ ಕಾಮಾಕ್ಯ ಶಕ್ತಿಪೀಠಕ್ಕೆ ಮೊದಲ ಭೇಟಿ
ನಟಿ ದೀಪಿಕಾ ದಾಸ್‌ ಕಾಮಾಕ್ಯ ಶಕ್ತಿಪೀಠಕ್ಕೆ ಮೊದಲ ಭೇಟಿ

ಕನ್ನಡದ ಪ್ರಖ್ಯಾತ ನಟಿ ದೀಪಿಕಾ ದಾಸ್‌ ಅವರು ಮೊದಲ ಬಾರಿಗೆ ದೇಶದ ಪವರ್‌ಫುಲ್ ದೇವಾಲಯಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯ ಕಾಮಾಕ್ಯ ಶಕ್ತಿಪೀಠಕ್ಕೆ ಭೇಟಿ ನೀಡಿದ್ದಾರೆ. ಬಿಗ್ ಬಾಸ್ ಮತ್ತು ನಾಗಿಣಿ ಧಾರಾವಾಹಿಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ದೀಪಿಕಾ, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸಕ್ರಿಯರಾಗಿದ್ದು, ತಮ್ಮ ದೇವಾಲಯದ ಭೇಟಿಯ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಸೀರೆ, ಕುಂಕುಮ, ಕೈಯಲ್ಲಿ ಹೂವಿನೊಂದಿಗೆ ದೇವಾಲಯದ ಮುಂದಿನ ಭಕ್ತಿಯಿಂದ ಭರಿತ ಫೋಟೋ ಶೇರ್‌ ಮಾಡಿರುವ ಅವರು, ಕಾಮಾಕ್ಯ ದೇವಿ ದೇವಸ್ಥಾನದ ಶಕ್ತಿಯ ಬಗ್ಗೆ ಅಭಿಮಾನಿಗಳಿಗೆ ಅನಿಸಿಕೆ ಮೂಡಿಸಿದ್ದಾರೆ.

ಪುರಾತನ ಶಕ್ತಿಪೀಠವಾಗಿರುವ ಈ ದೇವಸ್ಥಾನದಲ್ಲಿ ದೇವಿ ವಿಗ್ರಹವಿಲ್ಲ, ಬದಲಿಗೆ ಯೋನಿಯನ್ನೇ ಶಕ್ತಿರೂಪದಲ್ಲಿ ಪೂಜಿಸಲಾಗುತ್ತದೆ. ಜೂನ್‌ನಲ್ಲಿ ನಡೆಯುವ ಅಂಬುಬಾಚಿ ಉತ್ಸವದ ವೇಳೆ ದೇವಿಯ ‘ಮಾಸಿಕ ಧರ್ಮ’ವನ್ನು ಆಚರಿಸಲಾಗುತ್ತೆ ಎಂಬ ನಂಬಿಕೆ ಇದೆ. ಈ ಪವಿತ್ರ ತಾಣಕ್ಕೆ ಭೇಟಿ ಕೊಟ್ಟ ದೀಪಿಕಾ, ತಮ್ಮ ಆಧ್ಯಾತ್ಮಿಕ ಅನುಭವದಿಂದ ಖುಷಿಪಟ್ಟಿದ್ದಾರೆ.