Back to Top

ನಟಿ ಭಾವನಾ ರಾಮಣ್ಣಗೆ ಸೀಮಂತ ಶಾಸ್ತ್ರ: ಕುಟುಂಬದಲ್ಲಿ ಸಂತಸದ ವಾತಾವರಣ

SSTV Profile Logo SStv August 1, 2025
ನಟಿ ಭಾವನಾ ರಾಮಣ್ಣಗೆ ಸೀಮಂತ ಶಾಸ್ತ್ರ
ನಟಿ ಭಾವನಾ ರಾಮಣ್ಣಗೆ ಸೀಮಂತ ಶಾಸ್ತ್ರ

ನಟಿ ಭಾವನಾ ರಾಮಣ್ಣ ಅವರು ತಮ್ಮ ಅಮ್ಮನಾಗುತ್ತಿರುವ ಕ್ಷಣಗಳ ಸಂತಸದಲ್ಲಿ ತೊಡಗಿದ್ದಾರೆ. ಈಗಾಗಲೇ ಏಳು ತಿಂಗಳ ಗರ್ಭಿಣಿಯಾಗಿರುವ ಅವರು, ತಮ್ಮ ನಿವಾಸದಲ್ಲಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆಪ್ತ ಸ್ನೇಹಿತರು ಮಾತ್ರ ಆಹ್ವಾನಿತರಾಗಿದ್ದರು.

ಭಾವನಾ ಹಸಿರು ಬಣ್ಣದ ಸೀರೆ ಧರಿಸಿ ಆಕರ್ಷಕವಾಗಿ ಮಿಂಚಿದರು. ಸೀಮಂತ ಶಾಸ್ತ್ರವನ್ನು ಸಂಪ್ರದಾಯದಂತೆ ಸರಳವಾಗಿ ನಡೆಸಲಾಯಿತು. ಮತ್ತೈದೆಯರು ಭಾವನಾಗೆ ಮಡಿಲು ತುಂಬುವ ಶಾಸ್ತ್ರ ಮಾಡಿ ಸಿಹಿ ತಿನ್ನಿಸಿದರು. ಹಳದಿ ಹೂಗಳಿಂದ ಅಲಂಕರಿಸಲಾದ ಸ್ಥಳದಲ್ಲಿ ಶಾರದಾದೇವಿಯ ವಿಗ್ರಹ ಸಹ ಭಕ್ತಿಯ ಮನೋಭಾವವನ್ನು ಉಂಟುಮಾಡಿತು.

ಐವಿಎಫ್ ಮೂಲಕ ಗರ್ಭಿಣಿಯಾಗಿರುವ ಭಾವನಾ ರಾಮಣ್ಣ ಅವರು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.