Back to Top

ವಿವಾದದ ಮಧ್ಯೆ ಮತ್ತೆ ನಟ ರಕ್ಷಕ್ ಸುದ್ದಿಯಲ್ಲಿ: ಅಪಘಾತ ದೃಶ್ಯ ಮೊಬೈಲ್‌ನಲ್ಲಿ ಸೆರೆ

SSTV Profile Logo SStv August 2, 2025
ನಟ ರಕ್ಷಕ್ ಕಾರು ಎಡವಟ್ಟು
ನಟ ರಕ್ಷಕ್ ಕಾರು ಎಡವಟ್ಟು

ನಟ ರಕ್ಷಕ್‌ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪ್ರಥಮ್‌ ಜೊತೆಗಿನ ಗಲಾಟೆಯ ಬಳಿಕ ಇದೀಗ ಕಾರು ಅಪಘಾತಕ್ಕೆ ಕಾರಣರಾದ್ದರಿಂದ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಜುಲೈ 31ರಂದು ಬೆಳಿಗ್ಗೆ ಬೆಂಗಳೂರು ಮಾನ್ಯತಾ ಟೆಕ್ ಪಾರ್ಕ್ ಬಳಿಯ ತಿರುವಿನಲ್ಲಿ ಬೈಕ್ ಸವಾರ ವೇಣುಗೋಪಾಲ್ ಮತ್ತು ಅವರ ಸ್ನೇಹಿತೆ ಗೆ ರಕ್ಷಕ್ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ವೇಣುಗೋಪಾಲ್‌ ಕಾಲು ಮೂಳೆ ಮುರಿದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಘಾತದಿಂದ ಯುವಕನ ಕಿರುಚಾಟ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಾರು ಎಡವಟ್ಟು ಮಾಡಿಕೊಂಡ ರಕ್ಷಕ್‌ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದರೂ, ನಂತರ ಚಿಕಿತ್ಸೆ ವೆಚ್ಚದಲ್ಲಿ ಸಹಕಾರ ನೀಡಿಲ್ಲವೆಂದು ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಸಂಬಂಧಿತ ದೂರು ಪೊಲೀಸರು ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.