Back to Top

ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ ಸುಮಲತಾ

SSTV Profile Logo SStv November 9, 2024
ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ
ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ
ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ ಸುಮಲತಾ ನಟಿ ಮತ್ತು ಮಾಜಿ ಸಂಸದೆ ಸುಮಲತಾ, ನಟ ದರ್ಶನ್ ಅವರ ಆರೋಗ್ಯ ಮತ್ತು ಇತ್ತೀಚಿನ ಕೊಲೆ ಪ್ರಕರಣದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, "ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ," ಎಂದಿದ್ದಾರೆ. ಆರೋಗ್ಯದ ಚಿಂತೆ: "ವಿಜಯಲಕ್ಷ್ಮಿ ಜೊತೆ ಸಂಪರ್ಕದಲ್ಲಿದ್ದೇನೆ. ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅವರಿಗೆ ಇನ್ನೂ ಚಿಕಿತ್ಸೆ ಅಗತ್ಯವಿದೆ. ಬೆನ್ನುನೋವು ಹೆಚ್ಚಾಗಿ, ಶಸ್ತ್ರಚಿಕಿತ್ಸೆ ಮಾಡಿದರೆ ತುಂಬಾ ಸಮಯ ಹಿಡಿಯುತ್ತದೆ ಎಂಬ ಕಾರಣದಿಂದ ಅದನ್ನು ತಡೆಯುತ್ತಿದ್ದಾರೆ," ಎಂದು ಹೇಳಿದರು. ಕೇಸ್ ಮತ್ತು ಲೀಗಲ್ ಸವಾಲುಗಳು: "ದರ್ಶನ್‌ಗೆ ಲೀಗಲ್ ಚಾಲೆಂಜಸ್ ಇವೆ. ಅವರ ಪರ ವಕೀಲರು ನಿಜಾಂಶವನ್ನು ಸಾಬೀತು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಈ ಪ್ರಕರಣದ ಬಗ್ಗೆ ಸತ್ಯ ಹೊರಬರಬೇಕು. ದರ್ಶನ್ ನಿರಾಪರಾಧಿ ಅಂತಾ ಸಾಬೀತು ಆಗಲಿ ಎಂಬುದು ನನ್ನ ಆಶೆ," ಎಂದು ಸುಮಲತಾ ಅಭಿಪ್ರಾಯಪಟ್ಟಿದ್ದಾರೆ. ಚಿತ್ರರಂಗದ ನಷ್ಟ: "ಈ ಪ್ರಕರಣದಿಂದ ಚಿತ್ರರಂಗಕ್ಕೂ ದೊಡ್ಡ ನಷ್ಟವಾಗಿದೆ. ದರ್ಶನ್ ಹಿಟ್ ಚಿತ್ರಗಳನ್ನು ನೀಡಿದ ಬಿಗ್ಗೇಸ್ಟ್ ಪಿಲ್ಲರ್. ಇಂತಹ ಘಟನೆಯಿಂದ ನಿರ್ಮಾಪಕರೂ ಗೊಂದಲದಲ್ಲಿದ್ದಾರೆ," ಎಂದು ಅವರು ದುಃಖ ವ್ಯಕ್ತಪಡಿಸಿದರು. ಸಮುದಾಯದಲ್ಲಿ ದರ್ಶನ್ ಮೇಲಿರುವ ಪ್ರೀತಿ ಮತ್ತು ಬೆಂಬಲದ ಬಗ್ಗೆ ಮಾತನಾಡಿದ ಸುಮಲತಾ, "ನಾನು ದರ್ಶನ್ ಪರ ಇದ್ದೇನೆ. ಇಡೀ ಸಮಸ್ಯೆ ಪರಿಹಾರವಾಗಲಿ," ಎಂದು ತಮ್ಮ ಪ್ರಾರ್ಥನೆ ವ್ಯಕ್ತಪಡಿಸಿದ್ದಾರೆ.