Back to Top

ತ್ರಿವಿಕ್ರಮ್‌ ಫ್ಯಾನ್ಸ್‌ಗಾಗಿ ಸರ್ಪ್ರೈಸ್: ಒಂದೇ ಫ್ರೇಮ್‌ನಲ್ಲಿ ತ್ರಿವಿಕ್ರಮ್, ಹನುಮಂತ, ಧನರಾಜ್‌! ಕಲರ್ಸ್‌ ಕನ್ನಡ ಪ್ರೋಮೋ ವೈರಲ್!

SSTV Profile Logo SStv July 25, 2025
'ಮುದ್ದು ಸೊಸೆ' ಸೀರಿಯಲ್‌ನಲ್ಲಿ ಬಿಗ್‌ಬಾಸ್‌ ದೋಸ್ತರು ಒಂದೇ ಫ್ರೇಮ್‌ನಲ್ಲಿ!
'ಮುದ್ದು ಸೊಸೆ' ಸೀರಿಯಲ್‌ನಲ್ಲಿ ಬಿಗ್‌ಬಾಸ್‌ ದೋಸ್ತರು ಒಂದೇ ಫ್ರೇಮ್‌ನಲ್ಲಿ!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಬ್ಯುಸಿಯಾಗಿರುವಾಗಲೂ, ಅವರು ನಡುವಿನ ಸ್ನೇಹವನ್ನು ಉಳಿಸಿಕೊಂಡು ಆಗಾಗ್ಗೆ ಭೇಟಿಯಾಗುತ್ತಿರುವುದು ಅಭಿಮಾನಿಗಳಿಗೆ ಸಂತೋಷವನ್ನು ನೀಡುತ್ತಿದೆ.

ಇದೀಗ, ಬಿಗ್‌ಬಾಸ್‌ ನಟನೆ ಮತ್ತು ಸ್ನೇಹದ ಮುದ್ದಾದ ದೃಶ್ಯ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಕಂಡುಬರಲಿದೆ. ಈ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಭದ್ರನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಅವರ ಜೊತೆಗೆ ಹನುಮಂತ ಲಮಾಣಿ ಹಾಗೂ ಧನರಾಜ್ ಆಚಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರು ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನು ಧನರಾಜ್ ಅವರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ವಿಕ್ರಮ್ ಅವರ ಜೊತೆ ದೋಸ್ತಾ ಜೋಡಿ, ಮುದ್ದು ಸೊಸೆ ಧಾರಾವಾಹಿಯಲ್ಲಿ ಮೂವರು ಜೊತೆಗೆ ನಟಿಸಿದ ಕ್ಷಣ” ಎಂದು ಬರೆದುಕೊಂಡಿದ್ದಾರೆ.

ಈ ವಿಶೇಷ ಎಪಿಸೋಡ್‌ಗೆ ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದ್ದು, ತ್ರಿವಿಕ್ರಮ್ ಅಭಿಮಾನರಲ್ಲಷ್ಟೇ ಅಲ್ಲ, ಬಿಗ್‌ಬಾಸ್‌ ಪ್ರೇಮಿಗಳಲ್ಲೂ ಕಾತುರ ಮೂಡಿಸಿದೆ. ಬಿಗ್‌ಬಾಸ್‌ ಸ್ನೇಹ ಇಂದು ಕೂಡ ಪರದೆಯ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.