Back to Top

‘ಕಳಪೆ ಬೋರ್ಡ್​ ನಾನೇ ಹಾಕಿಕೊಳ್ತೇನೆ’ ಮೊದಲೇ ಸೋಲು ಒಪ್ಪಿಕೊಂಡ ಶೋಭಾ ಶೆಟ್ಟಿ

SSTV Profile Logo SStv November 30, 2024
ಮೊದಲೇ ಸೋಲು ಒಪ್ಪಿಕೊಂಡ ಶೋಭಾ ಶೆಟ್ಟಿ
ಮೊದಲೇ ಸೋಲು ಒಪ್ಪಿಕೊಂಡ ಶೋಭಾ ಶೆಟ್ಟಿ
‘ಕಳಪೆ ಬೋರ್ಡ್​ ನಾನೇ ಹಾಕಿಕೊಳ್ತೇನೆ’ ಮೊದಲೇ ಸೋಲು ಒಪ್ಪಿಕೊಂಡ ಶೋಭಾ ಶೆಟ್ಟಿ ‘ಬಿಗ್ ಬಾಸ್ ಕನ್ನಡ 11’ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಶೋಭಾ ಶೆಟ್ಟಿ ತಮಗೆ ತಾವೇ ಕಳಪೆ ಬೋರ್ಡ್ ಹಾಕಿಕೊಳ್ಳಲು ತೀರ್ಮಾನಿಸಿದ್ದು, ಆ ವಿಚಾರವನ್ನು ಹನುಮಂತ ಮತ್ತು ಧನರಾಜ್ ಜೊತೆ ಹಂಚಿಕೊಂಡಿದ್ದಾರೆ. ಈ ವಾರದ ಆಟದಲ್ಲಿ ಸರಿಯಾಗಿ ಮಿಂಚಲು ಸಾಧ್ಯವಾಗಿಲ್ಲವೆಂದು ಶೋಭಾ ಅಸಮಾಧಾನಗೊಂಡಿದ್ದಾರೆ. ರಾಜಾಡಳಿತ ಟಾಸ್ಕ್‍ನಲ್ಲಿ ಉಗ್ರಂ ಮಂಜು ರಾಜನಾಗಿ, ಮೋಕ್ಷಿತಾ ಯುವರಾಣಿಯಾಗಿ ಪ್ರಭಾವಶಾಲಿಯಾಗಿ ಆಡಿದ್ದರಿಂದ, ಶೋಭಾ ಸೇರಿದಂತೆ ಅನೇಕ ಸ್ಪರ್ಧಿಗಳಿಗೆ ಸಾಕಷ್ಟು ಅವಕಾಶವಿಲ್ಲದೆ ಉಳಿಯಿತು. ಅದರಿಂದಾಗಿ, ಶೋಭಾ ತಮ್ಮ ಆಡಿದ ಆಟದ ಬಗ್ಗೆ ಆತ್ಮಪರಿಶೀಲನೆ ನಡೆಸಿ ಕಳಪೆ ಪಟ್ಟ ತೆಗೆದುಕೊಂಡರು. ಕೊನೆಗೂ, ಇಡೀ ಮನೆಯವರು ಶೋಭಾಳ ಹೆಸರನ್ನೇ ಕಳಪೆ ಪಟ್ಟಗೆ ಆಯ್ಕೆ ಮಾಡಿದ್ದು, ಶೋಭಾ ಜೈಲುವಾಸ ಅನುಭವಿಸಬೇಕಾಯಿತು. ಕಣ್ಣೀರು ಹಾಕುತ್ತಲೇ ಜೈಲು ಸೇರಿದ ಶೋಭಾ, ತಮ್ಮ ತೀರಾ ವಿಭಿನ್ನ ಆಟಗಾರ್ತಿಯೆಂಬ ಚಿತ್ರವನ್ನು ಕನ್ನಡದ ಪ್ರೇಕ್ಷಕರಿಗೆ ತೋರಿಸುತ್ತಿದ್ದಾರೆ.