'ಅದೇ ಕಣ್ಣು' ಮೂಲಕ ಮೈಕ್ರೋ ವೆಬ್ ಸೀರಿಸ್‌ಗೆ ಮೋಕ್ಷಿತಾ ಪೈ ಗ್ರ್ಯಾಂಡ್ ಎಂಟ್ರಿ!


ಕನ್ನಡದ ಪ್ರಖ್ಯಾತ ನಟಿ ಮೋಕ್ಷಿತಾ ಪೈ, ಈಗ ತಮ್ಮ ಅಭಿನಯ ಕ್ಷೇತ್ರದಲ್ಲಿ ಹೊಸ ಮುನ್ನಡೆಯನ್ನು ಕಂಡುಕೊಂಡಿದ್ದಾರೆ. ಅವರು 'ಬುಲೆಟ್ ಆ್ಯಪ್'ನಲ್ಲಿ ಬಿಡುಗಡೆಯಾಗಲಿರುವ ಮೈಕ್ರೋ ವೆಬ್ ಸೀರಿಸ್ 'ಅದೇ ಕಣ್ಣು'ನಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸರಣಿ ವಿನೂತನವಾದ ಸ್ವರೂಪದಲ್ಲಿ ಮೂಡಿಬರುತ್ತಿದ್ದು, ಪ್ರತಿ ಎಪಿಸೋಡ್ ಕೇವಲ ಒಂದು ನಿಮಿಷದ ಅವಧಿಯದ್ದಾಗಿದೆ. ಮೋಕ್ಷಿತಾ ಈ ಸೀರಿಸ್‌ನಲ್ಲಿ ವಿನಯ್ ಅವರ ಜೊತೆ ಪತಿ-ಪತ್ನಿ ಪಾತ್ರದಲ್ಲಿ ನಟಿಸಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಕಥೆ ವಿಭಿನ್ನ ವಿನ್ಯಾಸದಲ್ಲಿದೆ. ಒಟ್ಟು 50 ಎಪಿಸೋಡ್‌ಗಳಿರುವ ಈ ಸರಣಿ 50 ನಿಮಿಷಗಳಲ್ಲಿ ಮುಗಿಯುತ್ತದೆ, ಮತ್ತು ವಿಶೇಷತೆ ಎಂದರೆ ಇದು ವೆರ್ಟಿಕಲ್ ಫಾರ್ಮ್ಯಾಟ್, ಅಂದರೆ ರೀಲ್ಸ್ ಶೈಲಿಯಲ್ಲಿ ನೋಡಬಹುದಾಗಿದೆ.
ಮೋಕ್ಷಿತಾ ಹೇಳುವ ಪ್ರಕಾರ, “ಈ ರೀತಿಯ ಪ್ರಸ್ತುತಿಯಲ್ಲಿ ನಟಿಸುವುದು ತುಂಬಾ ಚಾಲೆಂಜಿಂಗ್. ಧಾರಾವಾಹಿಗಳಂತೆ ಭಾವನೆಗಳನ್ನು ಡ್ರ್ಯಾಗ್ ಮಾಡಲಾಗದು. ಒಂದು ನಿಮಿಷದಲ್ಲಿ ಪಾತ್ರದ ಭಾವನೆ, ಡೈಲಾಗ್ ಎಲ್ಲವನ್ನೂ ತೋರಿಸಬೇಕು. ಇದು ಸುಲಭವಲ್ಲ.” ಎಂದು ವಿವರಿಸಿದ್ದಾರೆ.
ಈ ಸರಣಿಯನ್ನು 'ಪಾರು' ಸೀರಿಯಲ್ ಖ್ಯಾತಿಯ ನಿರ್ದೇಶಕ ದಿಲೀಪ್ ರಾಜ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಹಲವು ವರ್ಷಗಳ ನಂತರ ಮತ್ತೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದನ್ನು ಮೋಕ್ಷಿತಾ ಸಂತೋಷದಿಂದ ತಿಳಿಸಿದ್ದಾರೆ.
ಮುಗ್ಧ ಹುಡುಗಿ ಪಾತ್ರ ನಿರ್ವಹಿಸಿರುವ ಮೋಕ್ಷಿತಾ, ತಪ್ಪು ಎಪ್ಪತ್ತಾಗಿದ್ದರೂ ಸುಮ್ಮನೆ ಕುಳಿತುಕೊಳ್ಳದ ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹೊಸ ಪ್ರಯೋಗ ಕನ್ನಡದಲ್ಲಿ ಮೈಕ್ರೋ ವೆಬ್ ಸೀರಿಸ್ ಗಳಿಗೆ ಹೊಸ ಬಾಗಿಲು ತೆರೆದಂತಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
