Back to Top

ಮೈಖಲ್ ಜಾಕ್ಸನ್ ಧರಿಸಿದ್ದ ಕಾಲುಚೀಲಕ್ಕೆ ಅಭಿಮಾನಿಗಳ ಡಿಮಾಂಡ್: ಲಕ್ಷ ಲಕ್ಷ ರೂಪಾಯಿಗೆ ಮಾರಾಟ!

SSTV Profile Logo SStv August 1, 2025
ಮೈಖಲ್ ಜಾಕ್ಸನ್ ಕಾಲುಚೀಲ ಹರಾಜು
ಮೈಖಲ್ ಜಾಕ್ಸನ್ ಕಾಲುಚೀಲ ಹರಾಜು

ಪಾಪ್ ಸಂಗೀತದ ಸುಲ್ತಾನ್ ಮೈಖಲ್ ಜಾಕ್ಸನ್ ಅವರು ಈ ಲೋಕವನ್ನು ತೊರೆದೂ 15 ವರ್ಷಗಳು ಕಳೆದಿವೆ. ಆದರೆ, ಅವರ ಶೈಲಿ, ಅವರ ಸ್ಮರಣೆಗಳು, ಅವರ ವಸ್ತುಗಳು ಇಂದಿಗೂ ಪ್ರಪಂಚದಾದ್ಯಂತ ಅಪಾರ ಬೆಲೆಗೋಷ್ಟಿಯಾಗುತ್ತಿವೆ. ಇದೀಗ ಜಾಕ್ಸನ್ ಧರಿಸಿದ್ದ ಕಾಲುಚೀಲವೊಂದು ಭಾರಿ ಬೆಲೆಯಲ್ಲಿ ಹರಾಜಾಗಿದೆ ಎಂಬ ಸುದ್ದಿ ಸಂಗೀತ ಪ್ರೇಮಿಗಳಿಗೆ ಕುತೂಹಲ ಹುಟ್ಟಿಸಿದೆ.

1997ರಲ್ಲಿ ಫ್ರಾನ್ಸ್‌ನ ನಿಮೆಸ್‌ನಲ್ಲಿ ನಡೆದ ಭರ್ಜರಿ ಕಾನ್ಸರ್ಟ್‌ನಲ್ಲಿ ಮೈಖಲ್ ಜಾಕ್ಸನ್ ಅವರು ಧರಿಸಿದ್ದ ಬಿಳಿ ಬಣ್ಣದ ಹೊಳೆಯುವ ಕಾಲುಚೀಲಗಳನ್ನು ಫ್ರಾನ್ಸ್‌ನಲ್ಲಿ ಹರಾಜು ಮಾಡಲಾಗಿದೆ. ಈ ಕಾಲುಚೀಲಗಳು ಕಾಲಕ್ರಮದಲ್ಲಿ ಸ್ವಲ್ಪ ಹಳದಿಯಾಗಿ, ಅದರ ಅಲಂಕಾರದ ಕ್ರಿಸ್ಟಲ್ ಗಳು ಕೂಡ ಮಬ್ಬಾಗಿದ್ದರೂ ಸಹ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ₹7.70 ಲಕ್ಷಕ್ಕೆ ಮಾರಾಟವಾಗಿದೆ.

ಈ ಕಾಲುಚೀಲ 1997ರ ಜುಲೈ 6ರಂದು ನಡೆದ ಕಾರ್ಯಕ್ರಮದ ನಂತರ, ಜಾಕ್ಸನ್ ತಂಡದ ಸದಸ್ಯನೊಬ್ಬರಿಗೆ ದೊರಕಿತ್ತು. ಈ ವ್ಯಕ್ತಿ ಇಷ್ಟು ವರ್ಷಗಳ ಕಾಲ ಅದನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದೀಗ ಅದು ಪ್ಯಾರಿಸ್‌ನಲ್ಲಿ ಹರಾಜಾಗಿ ಹೊಸ ಮಾಲೀಕನ ಕೈ ಸೇರಿದೆ.

ಈ ಹಿಂದೆಯೂ ಮೈಖಲ್ ಜಾಕ್ಸನ್ ಧರಿಸಿದ್ದ ವಸ್ತುಗಳು ಭಾರೀ ಬೆಲೆಯಲ್ಲಿ ಹರಾಜಾಗಿದ್ದವು. 2023ರಲ್ಲಿ ಪ್ಯಾರಿಸ್‌ನಲ್ಲಿ ಅವರ ಟೋಪಿ ₹70 ಲಕ್ಷಕ್ಕೆ ಮಾರಾಟವಾಗಿತ್ತು. 2009ರಲ್ಲಿ ಅವರ ಕೈಗವಸು ₹3 ಕೋಟಿ ಮೌಲ್ಯದಲ್ಲಿ ಹರಾಜಾಗಿತ್ತು.

ಮೈಖಲ್ ಜಾಕ್ಸನ್ ಅವರ ಡ್ಯಾನ್ಸ್ ಮೂವ್ಸ್, ಮ್ಯೂಸಿಕ್, ಫ್ಯಾಷನ್ ಸೆನ್ಸ್ ಎಲ್ಲವೂ ಇಂದಿಗೂ ಐಕಾನಿಕ್ ಆಗಿವೆ. ಅವರ ಹಳೆಯ ವಸ್ತುಗಳು ತಮಗೆ ಸಾಂಸ್ಕೃತಿಕ ಮೌಲ್ಯವಿದೆ ಎಂಬ ಕಾರಣಕ್ಕೆ ಅಭಿಮಾನಿಗಳು ಮತ್ತು ಸಂಗ್ರಹಕಾರರು ಅವುಗಳಿಗಾಗಿ ಕೋಟಿ ಕೋಟಿ ಖರ್ಚು ಮಾಡುವುದರಲ್ಲಿ ಹಿಂಜರಿಯುವುದಿಲ್ಲ.

ಜಾಕ್ಸನ್ 2009ರ ಜೂನ್ 25ರಂದು 50ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಕಲೆಯ ಪವಾಡ ಇನ್ನೂ ಜೀವಂತವಿದೆ. ಈ ಹರಾಜು ಕೂಡ ಅದಕ್ಕೆ ಮತ್ತೊಂದು ಸಾಕ್ಷಿ!