Back to Top

ಹೊಸ ಫೋಟೋಶೂಟ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟಿ

SSTV Profile Logo SStv July 2, 2025
ಮೇಘಾ ಶೆಟ್ಟಿ ಹಾಟ್ ಲುಕ್ ವೈರಲ್
ಮೇಘಾ ಶೆಟ್ಟಿ ಹಾಟ್ ಲುಕ್ ವೈರಲ್

ಕಿರುತೆರೆಯ ಹಿಟ್ ಧಾರಾವಾಹಿ "ಜೊತೆ ಜೊತೆಯಲಿ" ಮೂಲಕ ಮನೆಮಾತಾದ ಮೇಘಾ ಶೆಟ್ಟಿ, ಈಗ ಸಿರೀಸ್ ಜಗತ್ತಿಗೆ ಗುಡ್‌ಬೈ ಹೇಳಿ ಚಲನಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಹೊಸ ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ತಮ್ಮ ಲುಕ್ಸ್‌ನಲ್ಲೂ ಪರಿವರ್ತನೆ ತಂದಿದ್ದಾರೆ.

ಇತ್ತೀಚೆಗೆ ಅವರು ಹಂಚಿಕೊಂಡಿರುವ ಹಾಟ್ ಹಾಗೂ ಸ್ಟೈಲಿಶ್ ಫೋಟೋಶೂಟ್, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಫೋಟೋಗೆ ನೆಟ್ಟಿಗರಿಂದ “ಅಪ್ಸರೆ ನೀನು, ನಾನಾದೆ ನಿನ್ನ ಕೈ ಸೆರೆ” ಎಂಬಂತ ಬ್ಯೂಟಿಫುಲ್ ಕಾಮೆಂಟ್‌ಗಳ ಸುರಿಮಳೆ ಕಂಡಿದೆ.

ಬೇರೆ ಭಾಷೆಗಳ ಸಿನಿಮಾಗಳಿಂದಲೂ ಆಫರ್‌ಗಳು ಬರ್ತಿದೆಯಂತೆ. ಮೇಘಾ ಶೆಟ್ಟಿ ಟ್ಯಾಲೆಂಟ್ ಮತ್ತು ಸೌಂದರ್ಯದ ಜೋಡಣೆಯಿಂದ ತಮ್ಮನ್ನು ವಿಭಿನ್ನ ನಟಿಯಾಗಿ ರೂಪಿಸಿಕೊಂಡಿದ್ದಾರೆ.