Back to Top

ಮಾತಿನಿಂದ ಮತ್ತೆ ವಿವಾದದ ಕೇಂದ್ರಬಿಂದುವಾದ ಪ್ರಥಮ್: ಹೆಣ್ಣು ಮಕ್ಕಳ ಬಗ್ಗೆ ವ್ಯಂಗ್ಯವಾಗಿ ಬರೆದ ಟ್ವೀಟ್ ವೈರಲ್

SSTV Profile Logo SStv July 12, 2025
ಮಾತಿನಿಂದ ಮತ್ತೆ ವಿವಾದದ ಕೇಂದ್ರಬಿಂದುವಾದ ಪ್ರಥಮ್
ಮಾತಿನಿಂದ ಮತ್ತೆ ವಿವಾದದ ಕೇಂದ್ರಬಿಂದುವಾದ ಪ್ರಥಮ್

ಬಿಗ್‌ಬಾಸ್ ಖ್ಯಾತಿ ನಟ ಪ್ರಥಮ್ ತನ್ನ ಟ್ವೀಟ್ ಮೂಲಕ ಮತ್ತೆ ವಿವಾದದ ಹೊಗೆಯನ್ನು ಎಳೆದುಕೊಂಡಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿ ಇರುವ ಈ ನಟ, ಈ ಬಾರಿ ಹೆಣ್ಣು ಮತ್ತು ಗಂಡು ಮಕ್ಕಳ ಬಗ್ಗೆ ಮಾಡಿದ ವ್ಯಂಗ್ಯ ಪೋಸ್ಟ್‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ತುಂಟ ಮನದ ಮಾಯೆ ನೀನು' ಎಂಬ ರೊಮ್ಯಾಂಟಿಕ್ ಸಾಂಗ್‌ನ ಲಿಂಕ್ ಹಂಚಿಕೊಳ್ಳುವ ವೇಳೆ, ಪ್ರಥಮ್ ಬರೆದಿದ್ದ ಟೀಕೆ ಇದೀಗ ವಿರೋಧ ಭುಗಿಲೆದ್ದಿದೆ. ಅವರ ಟ್ವೀಟ್‌ನಲ್ಲಿ, "ಈ ಹಾಡು ನೋಡದವರು ಸೋನುಗೌಡ, ಕಿಪಿ ಕೀರ್ತಿ ಥರ ಹೆಂಡತಿ ಸಿಗಲಿ, ಹುಡ್ಗಿ ಆಗಿದ್ರೆ ಕಾಫಿನಾಡ ಚಂದು, ದೀಪಕ್ ತರ ಗಂಡ ಸಿಗ್ಲಿ…" ಎಂಬ ಸಾಲುಗಳು ಲಿಂಗ ವೈಷಮ್ಯಕ್ಕೆ, ವೈಯಕ್ತಿಕ ಅವಮಾನಕ್ಕೆ ಕಾರಣವಾಗಿವೆ ಎಂದು ಹಲವರು ಹೇಳುತ್ತಿದ್ದಾರೆ.

ಟ್ವೀಟ್ ಡಿಲೀಟ್ ಮಾಡಿದ್ರು, ಸ್ಕ್ರೀನ್‌ಶಾಟ್ ವೈರಲ್!, ಹೆಚ್ಚುತ್ತಿರುವ ಟೀಕೆಗಳನ್ನು ಗಮನಿಸಿದ ಪ್ರಥಮ್ ಆ ಟ್ವೀಟ್ ಅನ್ನು ಕೂಡಲೇ ಅಳಿಸಿದರು. ಆದರೆ, ಈಗಾಗಲೇ ಅದರ ಸ್ಕ್ರೀನ್‌ಶಾಟ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳಿಗೆ ಕಾರಣವಾಗಿದೆ. ಅನಿತಾ ಚಂದ್ರ ಎಂಬ ಟ್ವಿಟರ್ ಬಳಕೆದಾರರು, “ಇವನ ವಿರುದ್ಧ ಯಾರಾದ್ರೂ ಟೀಕೆ ಮಾಡಿದ್ರೆ, ಕಾನೂನು ಸಹಾಯಕ್ಕಾಗಿ ಓಡೋ ವ್ಯಕ್ತಿಗೆ, ಇತರರ ಮನೆ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವ ಹಕ್ಕು ಯಾರು ಕೊಟ್ಟಿದ್ದಾರೆ?” ಎಂಬ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಅನೇಕ ಮಂದಿ ಈ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಥಮ್ ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೆ ಇಂತಹ ಪೋಸ್ಟ್‌ಗಳನ್ನು ಮಾಡುತ್ತಾ ಚರ್ಚೆಯ ಕೇಂದ್ರದಲ್ಲಿರಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ. ಹಿಂದೆಯೂ ನಟ ದರ್ಶನ್ ಅಭಿಮಾನಿಗಳ ಬಗ್ಗೆ ನೀಡಿದ್ದ ಟೀಕೆಗಳಿಂದಾಗಿ ಪ್ರಥಮ್ ಪೊಲೀಸರಿಗೆ ತಲಪಿದ್ದ ಪ್ರಕರಣವಿದೆ. ಬಿಗ್‌ಬಾಸ್ ನಂತರ ಕೆಲವೊಂದು ಚಿತ್ರಗಳಲ್ಲಿ ನಟಿಸಿದರೂ ಪ್ರಥಮ್‌ಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳು ಪ್ರಥಮ್ ಸುದ್ದಿಯಲ್ಲಿ ಉಳಿಯುವ ಒಬ್ಬ ತಂತ್ರವೆನ್ನಿಸುತ್ತಿದೆ.

ಪ್ರೇಕ್ಷಕರಿಂದ ಸಿಕ್ಕಿರುವ ಓಲೈಕೆ ಮತ್ತು ಖ್ಯಾತಿಯನ್ನು ಜವಾಬ್ದಾರಿಯಿಂದ ಬಳಸಿ, ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಬೇಕು ಎಂಬುದು ಯಾವುದೇ ಕಲಾವಿದನ ಕರ್ತವ್ಯ. ಪ್ರಥಮ್ ಮತ್ತೊಮ್ಮೆ ಆತ್ಮಪರಿಶೀಲನೆ ಮಾಡಿಕೊಂಡು ಶಿಸ್ತಿನಿಂದ ಮುನ್ನಡೆಯಬೇಕಾದ ಸಮಯ ಇದಾಗಿದೆ.