ಜುಲೈ 18ಕ್ಕೆ ‘ಎಕ್ಕ’ ಬಿಡುಗಡೆ – ಮಂತ್ರಾಲಯದಲ್ಲಿ ಪೂಜೆ ಸಲ್ಲಿಸಿದ ಯುವ ರಾಜ್‌ಕುಮಾರ್


ಅಭಿಮಾನಿಗಳ ಅಪೇಕ್ಷೆಯಲ್ಲಿರುವ 'ಎಕ್ಕ' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜುಲೈ 18ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಈ ಚಿತ್ರದ ಮುಂಚೆ, ನಟ ಯುವ ರಾಜ್‌ಕುಮಾರ್ ಮಂತ್ರಾಲಯದ ಗುರುರಾಯರ ದರ್ಶನ ಪಡೆದ ಅವರು, ಬಳಿಕ ರಾಯಚೂರಿನ ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಯುವ, "ಎಕ್ಕ ಸಿನಿಮಾದ ಪ್ರಾರಂಭಕ್ಕೂ ಮುನ್ನ ಮಂತ್ರಾಲಯದಲ್ಲಿ ಪೂಜೆ ಮಾಡಿದ್ವಿ. ಈಗ ಬಿಡುಗಡೆಗೂ ಮುನ್ನ ರಾಯರ ಆಶೀರ್ವಾದ ಪಡೆದಿದ್ದೇನೆ. ಇಡೀ ಪ್ರಯಾಣಕ್ಕೂ ರಾಯರೇ ಧೈರ್ಯ," ಎಂದು ತಿಳಿಸಿದರು.
'ಎಕ್ಕ' ಚಿತ್ರವು ಮನುಷ್ಯನಲ್ಲಿ ಒಳ್ಳೆತನ ಉಳಿಸಿಕೊಳ್ಳುವ ಸಂದೇಶ ನೀಡುತ್ತದೆ. 'ಜಾಕಿ' ಚಿತ್ರದ ಪಾತ್ರಗಳಿಂದ ಪ್ರೇರಣೆ ಪಡೆದು ಈ ಸಿನಿಮಾ ರೂಪುಗೊಂಡಿದೆ ಎಂದು ಯುವ ತಿಳಿಸಿದರು. ಚಿತ್ರದಲ್ಲಿರುವ ‘ಬ್ಯಾಂಗಲ್ ಬಂಗಾರಿ’ ಹಾಡು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.
ಯುವ ರಾಜ್‌ಕುಮಾರ್ ಮತ್ತು ಸಂಜನಾ ಆನಂದ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ, ಭಕ್ತಿಯಿಂದಲೇ ಆರಂಭವಾಗಿ ಈಗ ತಯಾರಾಗಿದ್ದು, ಚಿತ್ರರಂಗದಲ್ಲಿ ಹೊಸ ಹುಮ್ಮಸ್ಸು ತಂದಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
