Back to Top

ಮಂಜುಗೆ ಬಿಗ್ ಶಾಕ್ ಕೊಟ್ಟ ಗೌತಮಿ ಕ್ಯಾಪ್ಟನ್ಸಿ ಓಟದಿಂದ ಗೆಳೆಯನ ಹೊರಗಿಟ್ಟ ರೆಬೆಲ್ ಲೇಡಿ

SSTV Profile Logo SStv December 11, 2024
ಮಂಜುಗೆ ಬಿಗ್ ಶಾಕ್ ಕೊಟ್ಟ ಗೌತಮಿ
ಮಂಜುಗೆ ಬಿಗ್ ಶಾಕ್ ಕೊಟ್ಟ ಗೌತಮಿ
ಮಂಜುಗೆ ಬಿಗ್ ಶಾಕ್ ಕೊಟ್ಟ ಗೌತಮಿ ಕ್ಯಾಪ್ಟನ್ಸಿ ಓಟದಿಂದ ಗೆಳೆಯನ ಹೊರಗಿಟ್ಟ ರೆಬೆಲ್ ಲೇಡಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ನಲ್ಲಿ ಗೆಳೆಯ-ಗೆಳತಿ ಎಂಬ ಖ್ಯಾತಿ ಗಳಿಸಿದ ಮಂಜು ಹಾಗೂ ಗೌತಮಿ ಜಾಧವ್ ನಡುವೆ ಬಿರುಸು ಉಂಟಾಗಿದೆ. ಕ್ಯಾಪ್ಟನ್ ಗೌತಮಿ, ಮಂಜು ಅವರ ವರ್ತನೆಗೆ ಕೋಪಗೊಂಡು, ಸ್ನೇಹ ಕಟ್ ಎಂದು ಘೋಷಿಸಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ, ‘ನಾನು ಕ್ಯಾಪ್ಟನ್ ಆದಾಗ ನನ್ನನ್ನು ಲೀಡ್ ಮಾಡಬೇಡಿ’ ಎಂಬುದಾಗಿ ಗೌತಮಿ ಎಚ್ಚರಿಕೆ ನೀಡಿದ ವಿಡಿಯೋ ಹಂಚಲಾಗಿದೆ. ಟಾಸ್ಕ್​ನ ಸಂದರ್ಭದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸುತ್ತಿದ್ದಾಗ, ಗೌತಮಿ ಕೋಪಗೊಂಡು, ‘ನಾನು 20 ಸಾರಿ ಹೇಳಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ. ಹೀಗಾಗಿ, ಗೌತಮಿ ಅವರು ಕೈ ಎತ್ತಿ, ಮಂಜು ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಟ್ಟಿದ್ದಾರೆ. ‘ಸ್ನೇಹ, ಗೆಳತನ ಇಲ್ಲ. ಅದೆಲ್ಲ ಮುಗಿಸಿದೆ’ ಎಂದು ಘೋಷಣೆ ಮಾಡಿದ ಗೌತಮಿ, ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಈ ಘಟನೆ ಸ್ಪರ್ಧೆಯ ನಿರ್ವಹಣೆಗೆ ಹೊಸ ಟ್ವಿಸ್ಟ್ ನೀಡಿದಂತಾಗಿದೆ.