ಪವನ್ ಕಲ್ಯಾಣ್ ಸಿನಿಮಾದಲ್ಲಿ ಮುಖಕ್ಕೆ ಪರದೆ ಹಾಕಿಕೊಂಡು ಬಂದ ಮಹಿಳೆಯರು: ಕಾರಣವೇನು?


ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24ರಂದು ಬಿಡುಗಡೆಯಾಗಿ, ಅಭಿಮಾನಿಗಳಿಂದ ಭಾರೀ ಸ್ವಾಗತ ಪಡೆಯಿತು. ಸಿನಿಮಾದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಆರಂಭ ಕಂಡಿದ್ದು, ಪವನ್ ಅಭಿಮಾನಿಗಳು ರಾಜಕೀಯ ಧ್ವಜ ಹಾಗೂ ಕೆಂಪು ಟವೆಲ್ ಸಿನಿ ಹಬ್ಬವನ್ನೇ ಮಾಡಿದರು.
ಆದರೆ ಈ ಮಧ್ಯೆ ಚಿತ್ರಮಂದಿರಗಳಲ್ಲಿ ಕಂಡುಬಂದ ಒಂದು ದೃಶ್ಯ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತು ಕೆಲವು ಮಹಿಳೆಯರು ಮುಖಕ್ಕೆ ಕೆಂಪು ಬಣ್ಣದ ಪರದೆ ಧರಿಸಿ ಚಿತ್ರವೀಕ್ಷಿಸಿದರು. ಮೊದಲಿಗೆ ಈದೊಂದು ಪ್ರತಿಭಟನೆ ಎಂದು ಊಹಿಸಲಾಯಿತು. ಆದರೆ ಸತ್ಯವೇಕೆಂದರೆ, ಇದು ಮತ್ತೊಂದು ಸಿನಿಮಾದ ಪ್ರಚಾರ ಚಟುವಟಿಕೆಯಾಗಿತ್ತು.
ಮಹಿಳೆಯರ ಸ್ವಾತಂತ್ರ್ಯ ಕುರಿತು ಕತೆ ಹೇಳಲಿರುವ ‘ಪರದ’ ಎಂಬ ಹೊಸ ತೆಲುಗು ಸಿನಿಮಾದ ಪ್ರಚಾರಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಚಿತ್ರದಲ್ಲಿ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಮುಖ್ಯಪಾತ್ರೆಯಲ್ಲಿ ನಟಿಸಿದ್ದು, 'ಸಿನಿಮಾ ಬಂಡಿ' ಖ್ಯಾತಿಯ ನಿರ್ದೇಶಕ ಪ್ರವೀಣ್ ಕಂದ್ರೆಗುಲಾ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ 22ರಂದು ತೆರೆಗೆ ಬರಲಿರುವ ‘ಪರದ’ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಮಾಡಿ ಗಮನಸೆಳೆದಿದೆ.
ಈ ಮೂಲಕ 'ಹರಿ ಹರ ವೀರ ಮಲ್ಲು' ಸಿನಿಮಾ ವೇದಿಕೆಯಾಗಿದ್ದು, 'ಪರದ' ಚಿತ್ರತಂಡ ತನ್ನ ಸಿನಿಮಾಗೆ ಬೇರೆಯದೇ ರೀತಿಯಲ್ಲಿ ಕಣ್ಮರೆ ಆಗದಂತಹ ಪ್ರಚಾರ ನಡೆಸಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
