Back to Top

'ಮಹಾನಟಿ' ವೇದಿಕೆಯಲ್ಲಿ ಮಿಂಚಿದ ದಿವ್ಯಾಂಜಲಿ – ಯಶ್ ತಾಯಿಯಿಂದ ಚಿನ್ನದ ಮಾತು!

SSTV Profile Logo SStv July 7, 2025
'ಮಹಾನಟಿ' ವೇದಿಕೆಯಲ್ಲಿ ಮಿಂಚಿದ ದಿವ್ಯಾಂಜಲಿ
'ಮಹಾನಟಿ' ವೇದಿಕೆಯಲ್ಲಿ ಮಿಂಚಿದ ದಿವ್ಯಾಂಜಲಿ

ಜೀ ಕನ್ನಡದ ಪಾಪುಲರ್ ರಿಯಾಲಿಟಿ ಶೋ ‘ಮಹಾನಟಿ’ ಇದೀಗ ವಿಭಿನ್ನ ಕಾನ್ಸೆಪ್ಟ್‌ಗಳೊಂದಿಗೆ ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ. ಈ ವಾರದ 'ಆಕ್ಟ್ ವಿತ್ ಸ್ಟಾರ್ಸ್' ಎಂಬ ರೌಂಡ್‌ ವಿಶೇಷವಾಗಿದ್ದು, 24 ಸ್ಪರ್ಧಿಗಳು ಭಿನ್ನ ಶೈಲಿಯ ನಟನೆ ಮೂಲಕ ಗಮನ ಸೆಳೆದಿದ್ದಾರೆ.

ಬೀದರ್‌ನ ದಿವ್ಯಾಂಜಲಿ, ರಾಕಿಂಗ್ ಸ್ಟಾರ್ ಯಶ್ ಅವರ ಹಾರ್ಡ್‌ಕೋರ್ ಅಭಿಮಾನಿಯಾಗಿ ಪರಿಚಿತರಾಗಿದ್ದು, ವೇದಿಕೆಯಲ್ಲಿ ತೀವ್ರ ಭಾವುಕತೆ ತುಂಬಿದ ಸ್ಕಿಟ್‌ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. “ಹಸಿವೇ ತುಂಬಿರೋ ಹೊಟ್ಟೆಗೆ ಕ್ಯಾನ್ಸರ್ ಬಂದ್ರೆ ತಾನೆ ತಡೆಯೋದು?” ಎಂಬ ಕಥಾವಸ್ತುವಿನಿಂದ ಕೂಡಿದ ಅವರ ಅಭಿನಯಕ್ಕೆ ಜಡ್ಜ್‌ಗಳು ಭರ್ಜರಿ ಮೆಚ್ಚುಗೆ ಸೂಚಿಸಿದ್ದು, 5 ಸ್ಟಾರ್‌ಗಳ ಮಾನ್ಯತೆ ನೀಡಿದ್ದಾರೆ.

ಈ ಮಧ್ಯೆ ವೇದಿಕೆಯಲ್ಲಿ ಯಶ್‌ ತಾಯಿ ಪುಷ್ಪಾ ಅವರು ಸ್ಪೆಷಲ್ ಆಗಿ ಭಾಗವಹಿಸಿದ್ದು, ದಿವ್ಯಾಂಜಲಿಗೆ “ನೀನು ಬೆಳೆಯಬೇಕು, ಯಶ್ ನಿನ್ನ ಹುಡುಕಿಕೊಂಡು ಬರಬೇಕು” ಎಂಬ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಈ ಮಾತು ಕೇಳಿದ ವೇದಿಕೆಯೆಲ್ಲ ಚಪ್ಪಾಳೆ ಹೊಡೆದು ಭಾವುಕವಾದ ಕ್ಷಣಕ್ಕೆ ಸಾಕ್ಷಿಯಾಯಿತು.

ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿರುವ 'ಮಹಾನಟಿ' ಶೋ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದ್ದು, ದಿವ್ಯಾಂಜಲಿಯಂತಹ ಪ್ರತಿಭೆಗಳ ಮೂಲಕ ಶೋ ಗೆಳ್ತಿದೆ ಎಂಬುದು ಸ್ಪಷ್ಟವಾಗಿದೆ.