ಚಿರು ರೀತಿ ವ್ಯಕ್ತಿ ಬಂದರೆ ಮಾತ್ರ ಮದುವೆ – ಬೇರೆ ನಟನ ಜೊತೆ ಮದುವೆ ಗಾಸಿಪ್‌ಗೆ ಸ್ಪಷ್ಟನೆ ನೀಡಿದ ಮೇಘನಾ ರಾಜ್


ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್, ತಮ್ಮ ಜೀವನದ ಬಗ್ಗೆ ಹರಡುವ ವದಂತಿಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅವರ ಎರಡನೇ ಮದುವೆ ಬಗ್ಗೆ, ಹಾಗು ಬೇರೆ ನಟನೊಂದಿಗೆ ಮದುವೆಯಾಗುತ್ತಿದ್ದಾರೆ ಎಂಬ ಗಾಸಿಪ್ ಹರಡುತ್ತಿದ್ದಂತೆ, ಅವರು ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆ ಇಂದು ಭಾರೀ ಚರ್ಚೆಗೆ ಕಾರಣವಾಗಿದೆ.
ಮೇಘನಾ ನೇರವಾಗಿ ಹೇಳಿದ್ದು:
“ಅಂದು ನಾನು ಸಂದರ್ಶನದಲ್ಲಿ ಕೊಟ್ಟ ಉತ್ತರದ ಅರ್ಥವೇ ಕೆಲವರಿಗೆ ಆಗಿಲ್ಲ. ನನ್ನ ಬಗ್ಗೆ ಯಾವ ಹುಡುಗನ ಜೊತೆ ಮದುವೆಯಾಗ್ತಾರೆ ಎನ್ನೋ ಕಮೆಂಟ್‌ಗಳು ಬರುತ್ತಿವೆ. ಅವು ಕೇಳಿದಾಗ ನಗೆ ಬರುತ್ತೆ. ನಾನು ಇದಕ್ಕೆ ಉತ್ತರ ಕೊಟ್ಟರೆ, ಅವರು ಇನ್ನೂ ಹೆಚ್ಚು ಮಾತಾಡೋಕೆ ಆಹಾರ ಸಿಗುತ್ತೆ. ಹಾಗಾಗಿ ಇನ್ನು ಈ ಬಗ್ಗೆ ಮಾತನಾಡೋದಿಲ್ಲ" ಎಂದು ಸ್ಪಷ್ಟಪಡಿಸಿದರು. ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದು, ತಮ್ಮ ಮಗ ರಾಯನ್ನ ಜೊತೆಗಿನ ಪೋಷಕತ್ವ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವನು ಬೆಳೆಯುವ ಪ್ರತೀ ಹಂತವನ್ನು ಅವರು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೇ ವಿಚಾರವಾಗಿ ಮೇಘನಾ ಹಿಂದೊಮ್ಮೆ ಹೇಳಿದ್ದ ಮಾತುಗಳು ಕೂಡ ಪ್ರಸ್ತುತವಾಗಿವೆ:
“ಮದುವೆ ಬಗ್ಗೆ ಒತ್ತಡ ಇದೆ. ಆದರೆ ಯಾರ ಜೊತೆಗಾದರೂ ಮದುವೆಯಾಗಬೇಕೆಂಬ ತೀರ್ಮಾನ ನನ್ನದೇ ಆಗಿರಬೇಕು. ಚಿರು ರೀತಿ ವ್ಯಕ್ತಿ ಬಂದ್ರೆ ಮಾತ್ರ ನಾನು ಮತ್ತೆ ಮದುವೆಯಾಗಲು ಸಿದ್ಧ" ಎಂದು ಹೇಳಿದ್ದಾರೆ. ತಮ್ಮ ಜೀವನದಲ್ಲಿ ಚಿರು ಅವರ ಸ್ಥಾನ ಅವಿಭಾಜ್ಯವಾದದ್ದು, ಅವರ ಒಪ್ಪಿಗೆಯೇ ಮುಂದಿನ ನಿರ್ಧಾರಕ್ಕೆ ಕಾರಣವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ನಿಖರ, ಭಾವನಾತ್ಮಕ ಉತ್ತರಗಳ ಮೂಲಕ ಮೇಘನಾ ರಾಜ್ ತಮ್ಮ ಬದುಕು, ಬಾಳಿಗೆ ಸ್ಪಷ್ಟ ದಿಕ್ಕು ನೀಡುತ್ತಿದ್ದಾರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
