"ಕ್ಷಮಿಸಿ ಡಿ ಬಾಸ್..." – ಮಡೆನೂರು ಮನು ಬಹಿರಂಗವಾಗಿ ದರ್ಶನ್ ಬಳಿ ಕ್ಷಮೆ ಯಾಚನೆ! ವಿಡಿಯೋ ವೈರಲ್!


ಇತ್ತೀಚೆಗೆ ನಟ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ಕ್ಲಿಪ್‌ವೊಂದರಿಂದ ವಿವಾದದ ಕೇಂದ್ರಬಿಂದುವಾಗಿದ್ದ ಮಡೆನೂರು ಮನು, ಇದೀಗ ನಟ ದರ್ಶನ್ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಜಾಮೀನಿನ ಬಳಿಕ ಜೈಲಿನಿಂದ ಬಿಡುಗಡೆಯಾದ ಮನು, ಮೊದಲು ಶಿವರಾಜ್‌ಕುಮಾರ್ ಅವರ ಮನೆಗೆ ತೆರಳಿದ್ದರೂ ನಟರನ್ನು ಭೇಟಿಯಾಗಲಾಗಲಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ "ಡಿ ಬಾಸ್, ನಾನು ಪುಟ್ಟ ಕಲಾವಿದ, ಈ ಆಡಿಯೋ ಪ್ರಕರಣದಲ್ಲಿ ಬಲಿಯಾಗಿದ್ದೇನೆ. ದಯವಿಟ್ಟು ನನ್ನ ಕ್ಷಮಿಸಿ," ಎಂದು ಹೇಳಿ, ದರ್ಶನ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ್ದಾರೆ.
"ನನ್ನ ಉಸಿರು ಇರುವವರೆಗೆ ನಿಮಗೆ ಋಣಿಯಾಗಿರುತ್ತೇನೆ," ಎಂಬ ಮಾತುಗಳಿಂದ ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಮನು, ಅಭಿಮಾನಿಗಳ ಗಂಭೀರ ವಿರೋಧವನ್ನು ಪರಿಹರಿಸಲು ಯತ್ನಿಸಿದ್ದಾರೆ.
ಮನು ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದಿಂದಾಗಿ ಬಂಧನಕ್ಕೊಳಗಾಗಿದ್ದರ ಜೊತೆಗೆ, ಸ್ಟಾರ್ ನಟರ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಭಾರಿ ಟೀಕೆ ಎದುರಿಸುತ್ತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಬಿಡುಗಡೆ ಹೊತ್ತಲ್ಲಿಯೇ ಈ ಎಲ್ಲ ವಿವಾದಗಳು ಬೆಳಕಿಗೆ ಬಂದಿದ್ದು, ಅವರ ಚಿತ್ರರಂಗದ ಪ್ರಯಾಣದ ಮೇಲೆ ಪ್ರಶ್ನಾರ್ಚಕ ಎತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
