ಕುಂದಾಪುರದಲ್ಲಿ ರಿಷಬ್ ಶೆಟ್ಟಿಯ 42ನೇ ಜನ್ಮದಿನದ ಸಂಭ್ರಮ – ‘ಕಾಂತಾರ: ಚಾಪ್ಟರ್ 1’ ತಂಡದೊಂದಿಗೆ ಸರಳ ಆಚರಣೆ


ಪ್ಯಾನ್ ಇಂಡಿಯಾ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ 42ನೇ ಹುಟ್ಟುಹಬ್ಬವನ್ನು ಜುಲೈ 7ರಂದು ಕುಂದಾಪುರದಲ್ಲಿ ಸರಳವಾಗಿ ಆಚರಿಸಿಕೊಂಡರು. ತಮ್ಮ ಮುತುವರ್ಜಿಯಲ್ಲಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರದ ಶೂಟಿಂಗ್ ನಡೀತಿರುವ ಹಿನ್ನೆಲೆಯಲ್ಲಿ ಅವರು ಕುಂದಾಪುರದಲ್ಲೇ ಬೀಡುಬಿಟ್ಟಿದ್ದಾರೆ.
ಪ್ರೀತಿಯ ಮಡದಿ ಪ್ರಗತಿ ಶೆಟ್ಟಿ ಅವರು ಪತಿ ರಿಷಬ್‌ಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.. ಅದೇ ವೇಳೆ ಅವರಿಗೆ 'ದುರ್ಗಾಸ್ತಮಾನ' ಮತ್ತು 'ಸೀತಾ' ಎಂಬ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.
‘ಕಾಂತಾರ: ಚಾಪ್ಟರ್ 1’ ಚಿತ್ರತಂಡದ ಸದಸ್ಯರು, ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು, ಸಹ-ಸಂಸ್ಥಾಪಕ ಚಲುವೇಗೌಡ, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಮತ್ತು ಬರಹಗಾರರ ತಂಡ ಸೇರಿದಂತೆ ಅನೇಕರು ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಹಾರೈಕೆಗಳನ್ನು ತಿಳಿಸಿದರು.
ಅಕ್ಟೋಬರ್ 2ರಂದು ತೆರೆಗೆ ಬರಲಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದ್ದು, ಚಿತ್ರತಂಡದೊಂದಿಗೆ ರಿಷಬ್ ಶೆಟ್ಟಿಯ ಜನ್ಮದಿನವನ್ನು ಸರಳವಾಗಿ ಆಚರಿಸಲಾಗಿತ್ತು. ಅಭಿಮಾನಿಗಳಲ್ಲಿ ಈ ಸಂಭ್ರಮ ಭಾರಿ ಉತ್ಸಾಹ ಹುಟ್ಟಿಸಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
